VIRAL PHOTO| ಪಾರಿವಾಳಗಳು ಈ ಬಣ್ಣದಲ್ಲೂ ಇರುತ್ತವಾ ? ನೋಡಿದ್ರೆ ಆಶ್ಚರ್ಯವಾಗೋದು ಗ್ಯಾರೆಂಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾರಿವಾಳಗಳ ಎಂದರೆ ಯಾರಿಗಿಷ್ಟ ಇಲ್ಲ ಹೇಳಿ, ರಸ್ತೆಯಲ್ಲಿ ಕಂಡರೆ ಸಾಕು ಅವುಗಳಿಗೆ ಆಹಾರ ರಾಗಿ, ಜೋಳ, ಗೋಧಿ ಮುಂತಾದ ಆಹಾರಗಳನ್ನು ನೀಡಿ ಅವುಗಳೊಂದಿಗೆ ಫೋಟೋಗಳನ್ನು ಕೂಡ ತೆಗೆದುಕೊಳುತ್ತಾರೆ. ಸಾಮಾನ್ಯವಾಗಿ ಪಾರಿವಾಳಗಳು ಕಣ್ಣಿಗೆ ಬಿಳಿ, ಕಪ್ಪು, ಬೂದು ಬಣ್ಣದಲ್ಲಿರುತ್ತವೆ. ಆದರೆ ಈಗ ನೆಟ್‌ನಲ್ಲಿ ಕಾಣಿಸಿಕೊಂಡಿರುವ ಪಾರಿವಾಳದ ಫೋಟೋವೊಂದು ಅಚ್ಚರಿ ಮೂಡಿಸಿದೆ. ಈ ಪಾರಿವಾಳ ಗುಲಾಬಿ ಬಣ್ಣದಲ್ಲಿ ಕಂಡುಬಂದಿದ್ದು, ಯುಕೆಯ ಗ್ರೇಟ್ ಮ್ಯಾಂಚೆಸ್ಟರ್‌ನ ಟೌನ್ ಸೆಂಟರ್ ಬಳಿ ಈ ವಿಚಿತ್ರ ಪಾರಿವಾಳವನ್ನು ಗುರುತಿಸಲಾಗಿದೆ. ರಸ್ತೆಯಲ್ಲಿ ಜನ ಓಡಾಡುವಾಗ ಈ ಹಕ್ಕಿ ಕಾಣಿಸಿಕೊಂಡಿದೆ.

ಜನರು ಇದನ್ನು ಮೊದಲ ಬಾರಿಗೆ ನೋಡಿದಾಗ, ಯಾವುದೋ ವಿಚಿತ್ರ ಪಕ್ಷಿ ಎಂದು ಭಾವಿಸಿದ್ದರಂತೆ ಪಕ್ಷಿ ತಜ್ಞರ ಪರಿಶೀಲನೆ ಬಳಿಕ ಇದು ಪಾರಿವಾಳ ಎಂದು ಖಚಿತಪಡಿಸಿದರು. ಆದಾಗ್ಯೂ ಬಳಕೆದಾರರು ಇದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ನೀವು ಈ ಪಾರಿವಾಳವನ್ನು ಎಲ್ಲಿಯಾದರೂ ನೋಡಿದ್ದೀರಾ? ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

ಇದನ್ನು ನೋಡಿದ ಅನೇಕರು ಮ್ಯಾಂಚೆಸ್ಟರ್ ಟೌನ್ ಸೆಂಟರ್ ಬಳಿ ಇದೇ ರೀತಿಯ ಪಾರಿವಾಳವನ್ನು ನೋಡಿದ್ದೇವೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!