ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಅಮೆರಿಕದ ಕೋಸ್ಟರಿಕಾದಲ್ಲಿ 6 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡಿದೆ. ಸದ್ಯ ವಿಮಾನದಲ್ಲಿದ್ದವರ ಗುರುತು ಪತ್ತೆಯಾಗಿಲ್ಲ.
ಕೋಸ್ಟರಿಕಾದ ರಾಜಧಾನಿ ಸ್ಯಾನ್ ಜೋಸ್‌ನ ಆಗ್ನೇಯಕ್ಕೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ನವೆಂಬರ್ 25 ರಂದು ಮಧ್ಯಾಹ್ನದ ನಂತರ ಮೌಂಟ್ ಪಿಕೊ ಬ್ಲಾಂಕೊ ಬಳಿ ಅಪ್ಪಳಿಸಿತು.
ಶೋಧ ಮತ್ತು ರಕ್ಷಣಾ ಅಧಿಕಾರಿಗಳು ಬೆಟ್ಟದ ಮೇಲೆ ಅವಶೇಷಗಳನ್ನು ಕಂಡುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವನ್ನು ಪರ್ವತದ ತುದಿಯಲ್ಲಿ ಗುರುತಿಸಲಾಗಿದೆ. ಕೋಸ್ಟರಿಕಾದ ಉತ್ತರ ಕೆರಿಬಿಯನ್ ಕರಾವಳಿಯಲ್ಲಿರುವ ಟೋರ್ಟುಗುರೊದಿಂದ ವಿಮಾನವು ಟೇಕ್ ಆಫ್ ಆಗಿದ್ದು ಸ್ಯಾನ್ ಜೋಸ್‌ಗೆ ಹೋಗುತ್ತಿತ್ತು ಎಂದು ವರದಿಯಾಗಿದೆ.
ನಾಗರಿಕ ವಿಮಾನಯಾನ ಉಪನಿರ್ದೇಶಕ ಲೂಯಿಸ್ ಮಿರಾಂಡಾ ಕೂಡ ಇದನ್ನು ಖಚಿತಪಡಿಸಿದ್ದಾರೆ. ಆದರೆ ಪ್ರಯಾಣಿಕರ ಸ್ಥಿತಿ ಅಥವಾ ಅವರ ಗುರುತಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಬಂದಿಲ್ಲ. ಈ ವಿಚಾರದಲ್ಲಿ ಕೋಸ್ಟರಿಕಾದ ರೆಡ್‌ಕ್ರಾಸ್ ಸಂಸ್ಥೆಯು ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಮಾನ ಪತ್ತೆಯಾಗಿದೆ ಎಂದು ತಿಳಿಸಿದೆ.