ತಪ್ಪಿದ ಭಾರೀ ಅನಾಹುತ: ಲ್ಯಾಂಡಿಂಗ್ ವೇಳೆ ರನ್‌ವೇನಲ್ಲಿ ಜಾರಿದ ಕೊರಿಯನ್‌ ವಿಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಫಿಲಿಪೈನ್ಸ್ ವಿಮಾನ ನಿಲ್ದಾಣದಲ್ಲಿ ಭಾರೀ ಅಪಘಾತವನ್ನು ತಪ್ಪಿಸಲಾಗಿದೆ. ಮಧ್ಯ ಫಿಲಿಪೈನ್ಸ್‌ನಲ್ಲಿ ಪ್ರತಿಕೂಲ ಹವಾಮಾನದಿಂದಾಗಿ 173 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕೊರಿಯನ್ ಏರ್‌ಲೈನ್ಸ್ ವಿಮಾನ ಲ್ಯಾಂಡಿಂಗ್ ವೇಳೆ ಭಾನುವಾರ ತಡರಾತ್ರಿ ರನ್‌ವೇಯಿಂದ ಜಾರಿದೆ. ಘಟನೆಯಲ್ಲಿ ವಿಮಾನದ ಮುಂಭಾಗಕ್ಕೆ ಭಾರೀ ಹಾನಿಯಾಗಿದ್ದು, ಸದ್ಯ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಅಪಘಾತದ ಕಾರಣದಿಂದಾಗಿ ಹತ್ತಾರು ವಿಮಾನಗಳ ಲ್ಯಾಂಡಿಂಗ್‌ ರದ್ದುಗೊಳಿಸಲಾಗಿದೆ. ವಿಮಾನದ ಮುಂಭಾಗದ ಕೆಳಭಾಗ ಸಂಪೂರ್ಣ ಹಾನಿಯಾಗಿದೆ. ವಿಮಾನದಲ್ಲಿದ್ದ 11 ಸಿಬ್ಬಂದಿ ಮತ್ತು 162 ಪ್ರಯಾಣಿಕರು ಬಚಾವಾಗಿದ್ದು, ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Korean Airlines

ಕೊರಿಯನ್ ಏರ್ ಲೈನ್ಸ್ ಹೇಳಿಕೆಯ ಪ್ರಕಾರ, ದಕ್ಷಿಣ ಕೊರಿಯಾದ ಇಂಚಿಯಾನ್‌ನಿಂದ A330 ಮೂರನೇ ಪ್ರಯತ್ನದಲ್ಲಿ ರನ್‌ವೇ ಇಳಿಸಲು ಎರಡು ಬಾರಿ ಪ್ರಯತ್ನಿಸಿದೆ. ಪ್ರತಿಕೂಲ ಹವಾಮಾನದಿಂದಾಗಿ ಅದು ಸಾಧ್ಯವಾಗದ ಕಾರಣ ಮೂರನೇ ಪ್ರಯತ್ನದಲ್ಲಿ ಈ ಅವಘಡ ಸಂಭವಿಸಿದೆ. ಅಪಘಾತ ಸಂಭವಿಸಿದ ತಕ್ಷಣ, ಸ್ಥಳೀಯ ತುರ್ತು ಸಿಬ್ಬಂದಿ ಪ್ರದೇಶಕ್ಕೆ ಧಾವಿಸಿ, ವಿಮಾನದ ಎಸ್ಕೇಪ್ ಸ್ಲೈಡ್‌ಗಳ ಮೂಲಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದರು.

Korean Airlines

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!