ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟ್ರಾಪ್ ಮಾಡಲಾದ ವಿಮಾನವನ್ನು ರಸ್ತೆಯಲ್ಲಿ ಸಾಗಿಸುತ್ತಿದ್ದ ವೇಳೆ ಸೇತುವೆಯಡಿ ಸಿಲುಕಿಕೊಂಡಿದ್ದು, ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿಯ ಪಿಪ್ರಕೋಟಿ ಮೇಲ್ಸೇತುವೆಯಲ್ಲಿ ವಿಮಾನ ನಿಲುಕಿಹಾಕಿಕೊಂಡಿತ್ತು.
ಟ್ರಕ್ ಮೂಲಕ ಸಾಗಿಸುತ್ತಿದ್ದ ವಿಮಾನ ಸಿಲುಕಿದ್ದ ಕಾರಣ ಎರಡು ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಟೈರ್‌ನ ಗಾಳಿ ತೆಗೆದು ವಿಮಾನ ಮುಂದಕ್ಕೆ ಸಾಗಿಸಲು ಸಹಾಯ ಮಾಡಿದ್ದಾರೆ. ಇದೀಗ ವಿಮಾನ ಅಸ್ಸಾಂಗೆ ತೆರಳಿದೆ.