August 4, 2026
Tuesday, August 4, 2026
spot_img

ದಿನಭವಿಷ್ಯ: ಈ ರಾಶಿಯವರಿಗೆ ಗ್ರಹಗತಿ ಪೂರಕವಾಗಿದೆ, ಮಾನಸಿಕ ನೆಮ್ಮದಿ ಸಾಧ್ಯ

ಮೇಷ
ವೃತ್ತಿಕ್ಷೇತ್ರದಲ್ಲಿ ಅಧಿಕಾರಕ್ಕೆ ಪೈಪೋಟಿ ನಡೆದೀತು. ಸಹನೆಯಿಂದ ನಿಭಾಯಿಸಿ. ಹಳೆಯ ತಪ್ಪು ನಿಮ್ಮನ್ನು ಕಾಡಲು ಅವಕಾಶ ನೀಡಬೇಡಿ.    
ವೃಷಭ
ಮನಸ್ಸು ಪ್ರಕ್ಷುಬ್ಧ. ಅನಪೇಕ್ಷಿತ ಪ್ರಸಂಗ ಉಂಟಾದೀತು. ಆರೋಗ್ಯದ ಕಡೆ ಗಮನ ಕೊಡಿ. ವಿದ್ಯಾರ್ಥಿಗಳಿಗೆ ಗ್ರಹಗತಿ ಅನುಕೂಲಕರ.    
ಮಿಥುನ
ನಿಮ್ಮ ಜತೆ ಇರುವವರೆಲ್ಲ ನಿಮ್ಮ ಹಿತೈಷಿಗಳಲ್ಲ, ಅರಿಯಿರಿ. ಹಿರಿಯರ ಜತೆ ತುಸು ಕಾಲ ಕಳೆಯಿರಿ. ಆರ್ಥಿಕ ವ್ಯವಹಾರ ಸುಗಮ.            
ಕಟಕ
ಕಾರ್ಯಕ್ಷಮತೆ ಎಲ್ಲರ ಮೆಚ್ಚುಗೆ ಪಡೆಯಲಿದೆ. ನಿಮ್ಮಿಂದ ಕೆಲವರು ಹೆಚ್ಚು ಹಣ ಖರ್ಚು ಮಾಡಿಸುವರು. ಆ ಬಗ್ಗೆ ಎಚ್ಚರದಿಂದಿರಿ.            
ಸಿಂಹ
ಕನಸು ಕಂಡರಷ್ಟೆ ಸಾಲದು. ಅದಕ್ಕೆ ತಕ್ಕ ಶ್ರಮವೂ ಬೇಕು. ಕೌಟುಂಬಿಕ ಪರಿಸರ ಉಲ್ಲಾಸದಾಯಕ. ವೃತ್ತಿಯಲ್ಲಿ ಯಶಸ್ಸು.          
ಕನ್ಯಾ
ಗ್ರಹಗತಿ ನಿಮಗೆ ಪೂರಕ. ಸಂಬಂಧದಲ್ಲಿ ಸುಧಾರಣೆ. ಮಾನಸಿಕ ಶಾಂತಿ. ಆರ್ಥಿಕ ಸಂಕಷ್ಟ ಪರಿಹಾರ. ಉದ್ದೇಶವೊಂದು ಈಡೇರಲಿದೆ.
ತುಲಾ
ವೃತ್ತಿ ಸಮಸ್ಯೆ ಇತ್ಯರ್ಥ. ಆರ್ಥಿಕ ಬಿಕ್ಕಟ್ಟು ಪರಿಹಾರ. ನವ ವಿವಾಹಿತರಿಗೆ ಹರ್ಷದ ಸುದ್ದಿ.  ವಿದ್ಯಾರ್ಥಿಗಳಿಗೆ ಶುಭ ಬೆಳವಣಿಗೆ.
ವೃಶ್ಚಿಕ
ಪರಿಸ್ಥಿತಿಗೆ ಹೊಂದಿಕೊಂಡು ಬಾಳಿ, ಅದನ್ನು ಬದಲಿಸಲು  ಹೋಗಬೇಡಿ. ನಿಮ್ಮ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಬೇಕಾದೀತು.        
ಧನು
ಹೆತ್ತವರು ಮಕ್ಕಳ ಕಡೆ ಹೆಚ್ಚು ಗಮನ ಕೊಡಿ. ಋತುಮಾನ ಸಂಬಂಧ ಅನಾರೋಗ್ಯ ಸಂಭವ. ನಿಮ್ಮ ವ್ಯವಹಾರ ಸಕಾಲದಲ್ಲಿ ಮುಗಿಸಿ.        
ಮಕರ
ಜಡ ಸ್ವಭಾವ ಬಿಡಿ. ಉತ್ಸಾಹ ತುಂಬಿಕೊಳ್ಳಿ. ಆಪ್ತರ ಸಂಗದಲ್ಲಿ ಖುಷಿ ಪಡುವ ಬೆಳವಣಿಗೆ. ಆರ್ಥಿಕ ಬಿಕ್ಕಟ್ಟು ಇತ್ಯರ್ಥ. ಕೌಟುಂಬಿಕ ಸಾಮರಸ್ಯ.
ಕುಂಭ
ಕೆಲ ಸಮಯದಿಂದ ಕಾಡುತ್ತಿದ್ದ ಸಂಽ ನೋವು ನಿವಾರಣೆ. ಆರ್ಥಿಕ ಯೋಜನೆಗೆ ಉತ್ತೇಜನ ಸಿಗಲಿದೆ. ಪ್ರಮುಖ ಗುರಿ ಈಡೇರುವ ಸಾಧ್ಯತೆ.  
ಮೀನ
ಇಂದು ಹೆಚ್ಚು ಉತ್ಸಾಹ, ಕ್ರಿಯಾಶೀಲತೆ. ಅದನ್ನು ಸದುಪಯೋಗ ಮಾಡಿಕೊಳ್ಳಿ.  ವೃತ್ತಿಯಲ್ಲಿ ಮೂಡಿದ್ದ ಬಿಕ್ಕಟ್ಟು ಪರಿಹಾರ ಸನ್ನಿಹಿತ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !