TRAVEL DIARIES | ಗೋವಾ ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಈ ವಸ್ತುಗಳನ್ನು ಮಿಸ್ ಮಾಡದೇ ತೆಗೆದುಕೊಂಡು ಹೋಗಿ..

ಗೋವಾ ಟ್ರಿಪ್ ಮಾಡೋದು ಎಲ್ಲ ಸ್ನೇಹಿತರ ಅಲ್ಟಿಮೇಟ್ ಆಸೆ, ಯಾವ ಟ್ರಿಪ್ ಆದ್ರೂ ಸಕ್ಸಸ್ ಆಗತ್ತೆ ಆದರೆ ಗೋವಾ ಟ್ರಿಪ್ ಮಾತ್ರ ಆಗೋದಿಲ್ಲ. ಸ್ನೇಹಿತರ ಟೈಮ್ ಸೆಟ್ ಆಗೋದಿಲ್ಲ, ಒಬ್ಬರಿಗೆ ರಜ ಇದ್ರೆ ಇನ್ನೊಬ್ಬರಿಗೆ ಕೆಲಸ, ದುಡ್ಡು ಶಾರ್ಟೇಜ್ ಹೀಗೆ ಸಮಸ್ಯೆ ತಪ್ಪಿದ್ದಲ್ಲ. ಆದ್ರೆ ಅಪ್ಪಿತಪ್ಪಿ ನಿಮ್ಮ ಪ್ಲ್ಯಾನ್ ಸಕ್ಸಸ್ ಆದ್ರೆ ಈ ವಸ್ತುಗಳನ್ನು ಗೋವಾ ಟ್ರಿಪ್‌ಗೆ ತೆಗೆದುಕೊಂಡು ಹೋಗೋದನ್ನು ಮರೀಬೇಡಿ..

  • ಬೀಚ್‌ಗೆ ಹೋಗಿ ನೀರಲ್ಲಿ ಆಡದೇ ಇರೋಕೆ ಸಾಧ್ಯವಾ? ಬೀಚ್‌ವೇರ್ ಮರೀಬೇಡಿ
  • ಗೋವಾ ಬಿಸಿಲಿಗೆ ಟ್ಯಾನ್, ಡಿಹೈಡ್ರೇಟ್ ಎಲ್ಲವೂ ಆಗ್ತೀರಿ, ಹ್ಯಾಟ್ ತೆಗೆದುಕೊಂಡು ಹೋಗಿ
  • ಸೂಕ್ತವಾದ ಚಪ್ಪಲಿ ತೆಗೆದುಕೊಂಡು ಹೋಗಿ, ಶೂ ಅಥವಾ ಲೆದರ್ ಚಪ್ಪಲಿಯಿಂದ ಮರಳಿನಲ್ಲಿ ಓಡಾಡೋಕೆ ಆಗದಿರಬಹುದು.
  • ಎಲ್ಲಾ ಬಟ್ಟೆಗಳು ಕಾಟನ್ ಆಗಿರಲಿ, ಸೆಖೆಗೆ ಹೈರಾಣಾಗ್ತೀರಿ.
  • ಸನ್‌ಸ್ಕ್ರೀನ್ ಮರೆತುಬಿಟ್ರಾ? ಟ್ಯಾನ್ ಆಗದೇ ಹೋದ ಹಾಗೇ ಬರಬೇಕಂದ್ರೆ ಸನ್‌ಸ್ಕ್ರೀನ್ ಮಸ್ಟ್
  • ಸನ್‌ಗ್ಲಾಸಸ್ ಇರಲಿ, ಸ್ಟೈಲಿಶ್ ಆಗೂ ಕಾಣ್ತೀರಿ, ಬಿಸಿಲಿನಿಂದ ರಕ್ಷಣೆಯೂ ಸಿಗಲಿದೆ.
  • ಪ್ಲಾಸ್ಟಿಕ್ ಕವರ್‌ಗಳನ್ನು ತೆಗೆದುಕೊಂಡು ಹೋಗಿ, ಇವು ಎಲ್ಲದಕ್ಕು ಹೇಗಾದರೂ ಉಪಯೋಗಕ್ಕೆ ಬಂದೇ ಬರುತ್ತವೆ.
  • ಲಿಪ್ ಬಾಮ್ ಮರೆಯಬೇಡಿ, ಡಿಹೈಡ್ರೇಷನ್‌ನಿಂದ ತುಟಿಗಳು ಡ್ರೈ ಆಗಿ ಒಡೆಯುತ್ತವೆ. ಹಾಗಾಗಿ ಇದನ್ನು ಮರೆಯದೇ ತೆಗದುಕೊಂಡು ಹೋಗಿ.
  • ಫಸ್ಟ್ ಏಡ್ ಕಿಟ್ ಇರಲಿ, ತಲೆನೋವು, ವಾಂತಿ, ಹೊಟ್ಟೆನೋವು, ಮೈ ಕೈ ನೋವು, ಹ್ಯಾಂಗ್ ಓವರ್ ಮೆಡಿಸಿನ್ಸ್ ಜೊತೆಯಲ್ಲಿರಲಿ.
  • ಪವರ್ ಬ್ಯಾಂಕ್ ಇಟ್ಟುಕೊಳ್ಳಿ, ಸಿಕ್ಕಲ್ಲೆಲ್ಲಾ ಚಾರ್ಜ್ ಮಾಡೋಕೆ ಆಗೋದಿಲ್ವಲ್ಲಾ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!