ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಸಲ ಕಪ್ ನಮ್ದೇ ಎನ್ನುವ ಘೋಷವಾಕ್ಯದೊಂದಿಗೆ ಆರ್ಸಿಬಿ ಅಭಿಮಾನಿಗಳ ಟ್ರೋಫಿ ಗೆಲ್ಲುವ ಕನಸು ಇದೀಗ 18ನೇ ವರ್ಷಕ್ಕೆ ಬಂದು ನಿಂತಿದೆ. ಆದರೆ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಸಂದೇಶ ರವಾನಿಸಿದ್ದಾರೆ.
ಹೌದು, ವಿರಾಟ್ ಕೊಹ್ಲಿ ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳ್ಬೇಡಿ ಎಂದು ಸಂದೇಶ ಕಳಿಸಿದ್ದಾರೆ. ಈ ವಿಚಾರವನ್ನು ಎಬಿಡಿ ಇದೀಗ ಬಹಿರಂಗಪಡಿಸಿದ್ದಾರೆ.
ಒಂದ್ಸಲ ನಾನು ಈ ಸಲ ಕಪ್ ನಮ್ದೇ ಅಂತ ಹೇಳಿದ್ದೆ. ಇದನ್ನು ನೋಡಿದ ವಿರಾಟ್ ನನಗೆ ಮೆಸೇಜ್ ಕಳಿಸಿ, ಅದನ್ನು ಮಾತ್ರ ಹೇಳ್ಬೇಡಿ. ಈ ಸಲ ಕಪ್ ನಮ್ದೇ ಅಂತ ಕೇಳಿ ಕೇಳಿ ಸಾಕಾಗಿದೆ ಎಂದಿದ್ದರು ಎಂದು ಹೇಳಿದ್ದಾರೆ.
ಈ ಸಲ ಆರ್ಸಿಬಿ ಕಪ್ ಗೆಲ್ಲುತ್ತೆ ಎಂಬ ವಿಶ್ವಾಸವಿದೆ. ಈ ಬಾರಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ನಿರೀಕ್ಷೆಯಿದೆ ಎಬಿ ಡಿವಿಲಿಯರ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.