ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮದುವೆ ಬಗ್ಗೆ ಸಾಕಷ್ಟು ಟ್ರಾಲ್ಸ್ ಆಗಿವೆ.
ಮಹಾಲಕ್ಷ್ಮಿ ಸುಂದರವಾಗಿದ್ದಾರೆ ಆದರೆ ಇವರನ್ನೇಕೆ ಮದುವೆಯಾಗಿದ್ದಾರೆ ಅನ್ನೋ ರೀತಿ ಕಮೆಂಟ್ಗಳು ಹರಿದಾಡಿದ್ದವು. ಇದೀಗ ಮಹಾಲಕ್ಷ್ಮಿ ಈ ಬಗ್ಗೆ ಮಾತನಾಡಿದ್ದು, ನನ್ನ ಗಂಡನನ್ನು ಟ್ರೋಲ್ ಮಾಡಬೇಡಿ ಎಂದಿದ್ದಾರೆ. ನಾವು ಇಷ್ಪಪಟ್ಟು ಮದುವೆಯಾಗಿದ್ದೇವೆ. ರವೀಂದರ್ ದಪ್ಪ ಇದ್ದಾರೆ ಎಂದು ರೇಗಿಸುತ್ತಿದ್ದೀರಾ, ಇದು ಒಳ್ಳೆಯದಲ್ಲ ಇದರಿಂದ ನಮಗೆ ಬೇಸರವಾಗಿದೆ ಎಂದಿದ್ದಾರೆ.
ಇವರಿಬ್ಬರು ಪ್ರೀತಿಸುತ್ತಿದ್ದ ವಿಷಯ ಯಾರಿಗೂ ತಿಳಿದಿರಲಿಲ್ಲ. ಏಕಾಏಕಿ ಮದುವೆಯಾಗುವ ಮೂಲಕ ಎಲ್ಲರಿಗೂ ಸಪ್ರೈಸ್ ನೀಡಿದ್ದರು.