I.N.D.I.A ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಗೊಂದಲ: ಮಾಳ್ವಿಕಾ ಅವಿನಾಶ್ ವ್ಯಂಗ್ಯ !

ಹೊಸದಿಗಂತ ಬೆಳಗಾವಿ:

ಎನ್ ಡಿ ಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಮೋದಿಯವರು, ಆದರೆ, I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂದು ಅವರು ಹೇಳಬೇಕು. ಪ್ರಧಾನಿ ಯಾರು ಆಗುತ್ತಾರೆ ಎಂಬ ಬಗ್ಗೆ ಅವರಲ್ಲೇ ಗೊಂದಲ ಇದೆ ಎಂದು ರಾಜ್ಯ ಬಿಜೆಪಿ ವಕ್ತಾರೆ ಮಾಳ್ವಿಕಾ ಅವಿನಾಶ್ ವ್ಯಂಗ್ಯವಾಡಿದರು.‌

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ 14 ಸ್ಥಾನಕ್ಕೆ ಮಾರ್ಚ 7 ರಂದು ಮತದಾನ ನಡೆಯಲಿದೆ. ಇಲ್ಲಿಯೂ ಜನ ಉತ್ತಮ ಬೆಂಬಲ ಸೂಚಿಸುತ್ತಿದ್ದಾರೆ ಎಂದರು.
2014 ರ ಮುಂಚೆ ಭಾರತದಲ್ಲಿ ಸಾಕಷ್ಟು ಭ್ರಷ್ಟಾಚಾರ ಇತ್ತು, ಆದರೆ 2014 ರ ನಂತರ ಮೋದಿ ಸರ್ಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ.‌ ಕಳೆದ 10 ವರವರ್ಷಗಳಲ್ಲಿ ಭಾರತದ ಆರ್ಥಿಕತೆ 5ನೇ ಸ್ಥಾನಕ್ಕೆ ಬಂದಿದೆ. ಕೋವಿಡ್ ಇದ್ದರು ದೇಶ ಅಭಿವೃದ್ಧಿ ಸಾಧಿಸಿದೆ ಎಂದು ತಿಳಿಸಿದರು.

ಜೂನ್ 4 ರ ನಂತರ ಮೋದಿಯವರು ಪ್ರಧಾನಿಯಾದ ಬಳಿಕ ಕೆಲವೆ ವರ್ಷಗಳಲ್ಲಿ ಭಾರತವನ್ನು 3 ಅತೀ ದೊಡ್ಡ ಆರ್ಥಿಕ ದೇಶವನ್ನು ಮಾಡುವ ಗುರಿ ಹೊಂದಿದ್ದಾರೆ. ಹಾಗಾಗಿ ಜಗದೀಶ್ ಶೆಟ್ಟರ್ ಅವರನ್ನು ಬೆಳಗಾವಿ ಕ್ಷೇತ್ರದಲ್ಲಿ ಗೆಲ್ಲಿಸಬೇಕು. ಮೋದಿಯವರ ಆಡಳಿತದಲ್ಲಿ ಬೆಳಗಾವಿಯಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ ಎಂದು ತಿಳಿಸಿದರು.‌

ಏ. 27ಕ್ಕೆ ಪ್ರಧಾನಿ ಮೋದಿ ಬೆಳಗಾವಿಯಲ್ಲಿ ವಾಸ್ತವ್ಯ..

ಬೆಳಗಾವಿಯಲ್ಲಿ ಮೋದಿಯವರು ಕೈಗೊಂಡಿದ್ದ ಬೆಳಗಾವಿ ಪ್ರವಾಸದ ಸಮಯದಲ್ಲಿ ಬದಲಾವಣೆ ಆಗಿದೆ. ಏ. 28 ರ ಬದಲಾಗಿ 27 ರಂದೆ ಬೆಳಗಾವಿಗೆ ಆಗಮಿಸಿ ವಾಸ್ತವ್ಯ ಹುಡಲಿದ್ದಾರೆ ಎಂದು ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾದ್ಯಕ್ಷ ಶುಭಾಸ ಪಾಟೀಲ್ ಹೇಳಿದ್ದಾರೆ.

ಮೊದಿಯವ ಕಾರ್ಯಕ್ರಮದ ಸಮಯ ಬದಲಾಗಿದೆ. ಏ. 28 ರಂದು ಬೆಳಗ್ಗೆ 12 ಗಂಟೆಗೆ ವೇಧಿಕೆ ಕಾರ್ಯಕ್ರಮ ಆಗಲಿದೆ ಎಂದು ಹೇಳಲಾಗುತ್ತಿತ್ತು ಆದರೆ 28 ರಂದು 10 ಗಂಟೆ ವೇದಿಕೆ ಕಾರ್ಯಕ್ರಮ ನಡೆಯಲಿದೆ.‌ ಮಹಾರಾಷ್ಟ್ರದಿಂದ ರಸ್ತೆ ಮೂಲಕ ಬೆಳಗಾವಿಗೆ ಏ 27 ರಂದು ಬಂದು ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಮೋದಿಯವರು ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿಸಿದರು.‌

ಈ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪ, ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಇರಲಿದ್ದಾರೆ ಎಂದು ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!