ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಂದ ಆತ್ಮೀಯ ಸ್ವಾಗತ ಸಿಕ್ಕಿತು. ಬಳಿಕ ಇಸ್ರೋ ಕೇಂದ್ರದೊಳಗೆ ಕಾಲಿಡುತ್ತಿದ್ದಂತೆ, ಚಂದ್ರಯಾನ-3 ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ಇಸ್ರೋ ತಂಡದ ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.
#WATCH | Bengaluru: Prime Minister Narendra Modi congratulates scientists of the ISRO team for the successful landing of Chandrayaan-3 on the Moon pic.twitter.com/xh7jDWdN4b
— ANI (@ANI) August 26, 2023
ನಂತರ ಚಂದ್ರಯಾನ-3 ಯಶಸ್ಸಿನ ಕುರಿತು ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಪ್ರಧಾನಿ ಮೋದಿಗೆ ಮಾಹಿತಿ ನೀಡಿದರು. ಪ್ರಜ್ಞಾನ್ ರೋವರ್ ಕಾರ್ಯನಿರ್ವಹಣೆ, ಅನ್ವೇಷಣೆ ಬಗ್ಗೆ ಕೂಲಂಕುಷವಾಗಿ ವಿವರಣೆ ನೀಡಿದರು. ಪ್ರಧಾನಿಯವರೂ ಕೂಡ ಅಷ್ಟೇ ಕುತೂಹಲಕಾರಿಯಾಗಿ ಪ್ರಶ್ನೆಗಳ್ನು ಕೇಳುತ್ತಾ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡರು.