– ರಾಚಪ್ಪಾ ಜಂಬಗಿ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಸದುಪಯೋಗ ತೊಗರಿಯ ನಾಡಿನ ರೈತಾಪಿ ವರ್ಗ ಭರಪೂರ ಪಡೆದುಕೊಂಡು, ತಮ್ಮ ಜೀವನ ಹಸನು ಮಾಡಿಕೊಳ್ಳುವುದರ ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ನಿಗದಿಯಂತೆ ಕೇಂದ್ರ ಸರ್ಕಾರದ 6000 ಸಾವಿರ ಹಾಗೂ ರಾಜ್ಯ ಸರ್ಕಾರದ 4000ರಂತೆ ಪ್ರತಿ ವರ್ಷಕ್ಕೆ ಮೂರು ಕಂತುಗಳಲ್ಲಿ ಜಿಲ್ಲೆಯ 2,68,087 ರೈತ ಫಲಾನುಭವಿಗಳು 2000 ರೂ.ನೇರವಾಗಿ ತಮ್ಮ ಖಾತೆಯಿಂದ ಪಡೆದುಕೊಂಡು ಉತ್ತಮ ಜೀವನೋಪಾಯ ಕಂಡುಕೊಳ್ಳುವಲ್ಲಿ ಸಫಲತೆ ಕಂಡಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ಬಳಕೆ:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸಕಾಲಕ್ಕೆ ನೇರವಾಗಿ ರೈತರ ಖಾತೆ ಬೀಳುವ 2000 ಹಣದಿಂದ ಜಿಲ್ಲೆಯ ರೈತರು ಬೀಜ, ಗೊಬ್ಬರ, ಕೂಲಿಕರ ಸಂಬಳ ಇತ್ಯಾದಿ ಸೇರಿದಂತೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಉಳಿದ ಹಣದಿಂದ ಬೆಳೆಗಳಿಗೆ ಸಿಂಪರಣೆ ಮಾಡುವ ಔಷ ಖರೀದಿ ಮಾಡುವ ಮೂಲಕ ಯೋಜನೆ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿ ಯೋಜನೆಯನ್ನು ಅತೀ ಹೆಚ್ಚು ಸದ್ಬಳಕೆ ಮಾಡಿಕೊಂಡ ತಾಲೂಕುಗಳಲ್ಲಿ ಜಿಲ್ಲೆಯ ಯಡ್ರಮಿ, ಸೇಡಂ, ಆಳಂದ, ಕಮಲಾಪುರ, ಅಫಜಲಪುರ ಹಾಗೂ ಕಲಬುರಗಿ ತಾಲೂಕಿನ ಆಜಾಧಪುರ ಒಳಗೊಂಡಿವೆ. ಸದ್ಬಳಕೆ ಮಾಡಿಕೊಂಡ ರೈತರಲ್ಲಿ ಯೋಗೇಶ ಮಾನೆ ( ಆಜಾದಪುರ ಗ್ರಾಮ), ಶರಣಪ್ಪಾ ಯಾದವ (ಅಡಕಿ ಗ್ರಾಮ), ರೇವಣಸಿದ್ದಪ್ಪ (ತೊಂಡಕಲ್ ಗ್ರಾಮ), ಮಲ್ಲಿನಾಥ ಪಾಟೀಲ (ಔರಾದಬಿ ಗ್ರಾಮ), ಅಮರೇಶ ಪಾಟೀಲ (ಯಡ್ರಾಮಿ) ತಾಲೂಕಿನವರಾಗಿದ್ದಾರೆ.
ರೈತರ ಖಾತೆಗೆ 611 ಕೋಟಿ ಹಣ:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯ 2,68,087 ರೈತರಿಗೆ 2021-22 ಮಾರ್ಚ್ವರೆಗೆ 611 ಕೋಟಿ ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದ್ದು, ಇನ್ನೂ 722 ಕೋಟಿ ಹಣ ಹಾಕುವ ಪ್ರಕ್ರಿಯೆ ನಡೆದಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಸಹಾಯಕ ಸಿದ್ದಲಿಂಗಪ್ಪ ತೆಗ್ಗಿ ತಿಳಿಸಿದ್ದಾರೆ.
ರೈತರಿಗೆ ಮನವಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರ್ಥಿಕ ನೆರವು ಪಡೆಯಲು ರೈತ ಬಾಂಧವರಲ್ಲಿ ರಾಜ್ಯ ಸರ್ಕಾರ ಮನವಿ ಮಾಡಿದ್ದು, ಆಗಸ್ಟ್-ನವೆಂಬರ್ ಅವಧಿಯ ಪಿಎಂ ಕಿಸಾನ್ ಆರ್ಥಿಕ ನೆರವು ವರ್ಗಾವಣೆಗಾಗಿ 31 ಜುಲೈ 2022ರೊಳಗಾಗಿ ಈ-ಕೆವೈಸಿ ಮಾಡಿಸಿಕೊಳ್ಳಲು ಎಲ್ಲ ರೈತಾಪಿ ವರ್ಗಕ್ಕೆ ಮನವಿ ಮಾಡಿಕೊಂಡಿದೆ.