ಕೊರೊನಾ ವರದಿ: ದೇಶದಲ್ಲಿ 18,313 ಹೊಸ ಕೇಸ್‌ ಪತ್ತೆ, 57 ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 18,313 ಹೊಸ ಕೋವಿಡ್ ಪ್ರಕರಣಗಳು ಮತ್ತು 57 ಸಾವುಗಳು ವರದಿಯಾಗಿವೆ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಸಕ್ರಿಯ ಪ್ರಕರಣಗಳ ಸಂಖ್ಯೆ 1,45,026 ರಷ್ಟಿದೆ. ಇಲ್ಲಿಯವರೆಗೆ ಒಟ್ಟು 4.39 ಕೋಟಿ ಜನರು ಸೋಂಕಿಗೆ ತುತ್ತಾಗಿದ್ದು ಒಟ್ಟೂ 5,26,167 ಸಾವುಗಳು ಸಂಭವಿಸಿದೆ.

ಕಳೆದ 24 ಗಂಟೆಗಳಲ್ಲಿ 20,742 ಕ್ಕೂ ಹೆಚ್ಚು ರೋಗಿಗಳು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಕೋವಿಡ್ ಪ್ರಾರಂಭವಾದಾಗಿನಿಂದ 4,32,67,571 ಕ್ಕೂ ಹೆಚ್ಚು ಜನರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ.

ಒಟ್ಟೂ 202.79 ಕೋಟಿಗೂ ಹೆಚ್ಚು ಲಸಿಕೆ ವಿತರಿಸಲಾಗಿದ್ದು ಅದರಲ್ಲಿ 93.08 ಕೋಟಿ ಎರಡನೇ ಡೋಸ್ ಮತ್ತು 7.81 ಕೋಟಿ ಮುನ್ನೆಚ್ಚರಿಕೆ ಡೋಸ್ ವಿತರಿಸಲಾಗಿದೆ.

ದೇಶವು ಇಲ್ಲಿಯವರೆಗೆ 87.36 ಕೋಟಿ ಕೋವಿಡ್ ಪರೀಕ್ಷೆಗಳನ್ನು ನಡೆಸಿದ್ದು, ಕಳೆದ 24 ಗಂಟೆಗಳಲ್ಲಿ 4,25,337 ಪರೀಕ್ಷೆಗಳನ್ನು ನಡೆಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!