ಇಂದು ಭಾರತ v/s ಆಸ್ಟ್ರೇಲಿಯಾ 4ನೇ ಟೆಸ್ಟ್‌: ಪಂದ್ಯಕ್ಕೆ ಸಾಕ್ಷಿಯಾದ ಉಭಯ ರಾಷ್ಟ್ರದ ಪ್ರಧಾನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಾರ್ಡರ್ ಗವಾಸ್ಕರ್ ಕ್ರಿಕೆಟ್ ಟ್ರೋಫಿಯ ನಾಲ್ಕನೇ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತುಆಸ್ಟ್ರೇಲಿಯಾದ ಪ್ರಧಾನಿ ಆಂಟನಿ ಅಲ್ಬನೀಸ್ ಸಾಕ್ಷಿಯಾಗಿದ್ದಾರೆ.

ಕ್ರೀಡಾಂಗಣಕ್ಕೆ ಆಗಮಿಸಿದ ಶ್ರೀ ಅಲ್ಬನೀಸ್ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಆತ್ಮೀಯ ಸ್ವಾಗತವನ್ನು ನೀಡಿದರು. ಇಬ್ಬರೂ ನಾಯಕರು ತಮ್ಮ ತಮ್ಮ ಟೆಸ್ಟ್ ನಾಯಕರಿಗೆ ಟೆಸ್ಟ್ ಕ್ಯಾಪ್‌ಗಳನ್ನು ಹಸ್ತಾಂತರಿಸಿದರು. ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸ್ಪರ್ಧೆಗಳ ಶ್ರೀಮಂತ ಇತಿಹಾಸವನ್ನು ಪ್ರದರ್ಶಿಸುವ ಸ್ನೇಹ ಮಂದಿರವನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಉದ್ಘಾಟಿಸಿದರು.

ಭಾರತ ಮತ್ತು ಆಸ್ಟ್ರೇಲಿಯಾ ಈ ವರ್ಷ 75 ವರ್ಷಗಳ ಕ್ರಿಕೆಟ್ ಸ್ನೇಹವನ್ನು ಸಂಭ್ರಮಿಸಿದೆ. ಇಬ್ಬರು ನಾಯಕರು ಕ್ರೀಡಾಂಗಣಕ್ಕೆ ಆಮಿಸಿದರು, ಐತಿಹಾಸಿಕ ಪಂದ್ಯವನ್ನು ವೀಕ್ಷಿಸಲು ಮತ್ತು ತಮ್ಮ ತಂಡಗಳನ್ನು ಹುರಿದುಂಬಿಸಲು ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಪ್ರೇಕ್ಷಕರತ್ತ ಕೈಬೀಸಿದರು. ಈ ಸಂದರ್ಭದಲ್ಲಿ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್, ಸಿಎಂ ಭೂಪೇಂದ್ರ ಪಟೇಲ್ ಮತ್ತು ಬಿಸಿಸಿಐ ಮುಖ್ಯಸ್ಥ ಜಯ್ ಶಾ ಉಪಸ್ಥಿತರಿದ್ದರು.

ಈ ವೇಳೆ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವಿಶ್ವ ಟೆಸ್ಟ್‌ಚಾಂಪಿಯನ್‌ಶಿಪ್‌ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆದುಕೊಳ್ಳಬೇಕೆಂದರೆ ಭಾರತ ಈ ಪಂದ್ಯವನ್ನು ಗೆಲ್ಲಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!