ಆಸ್ಕರ್‌ನಲ್ಲಿ ಮಿಂಚಿದ ಭಾರತೀಯ ಸಿನಿಮಾಗಳು, ‘ಹೆಮ್ಮೆಯಾಗುತ್ತಿದೆ’ ಎಂದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತೀಯ ಪ್ರೇಕ್ಷಕರ ನಿರೀಕ್ಷೆ ಅಂತೂ ನಿಜವಾಗಿದೆ. ಆರ್‌ಆರ್‌ಆರ್‌ನ ನಾಟು ನಾಟು ಹಾಡು ಎಲಿಫೆಂಟ್‌ ವಿಸ್ಪರರ್ಸ್‌ ಸಿನಿಮಾಗಳಿಗೆ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್‌ ದಕ್ಕಿದೆ. ದೇಶಾದ್ಯಂತ ಅಭಿಮಾನಿಗಳು, ಸಿನಿರಂಗ, ರಾಜಕೀಯ ನಾಯಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರೂ ಅಭಿನಂದನೆ ಸಲ್ಲಿಸಿದ್ದು, ಈ ಗೆಲುವು ʻಅಸಾಧಾರಣ! ‘ನಾಟು ನಾಟು’ ಜನಪ್ರಿಯತೆ ಜಾಗತಿಕವಾಗಿದೆ. ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡು. ಎಂಎಂ ಕೀರವಾಣಿಯವರಿಗೆ ಅಭಿನಂದನೆಗಳು. ಈ ಪ್ರತಿಷ್ಠಿತ ಗೌರವ ಪಡೆದ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ಆಸ್ಕರ್‌ ಪ್ರಶಸ್ತಿ ಪಡೆದಿದ್ದಕ್ಕೆ ಭಾರತವು ಹೆಮ್ಮೆಪಡುತ್ತದೆʼ. ಎಂದು ಟ್ವೀಟ್‌ ಮಾಡಿದ್ದಾರೆ.

ಹಾಗೆಯೇ ಮತ್ತೊಂದು ಕಿರುಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ನ ಸಂಪೂರ್ಣ ತಂಡಕ್ಕೂ ಅಭಿನಂದನೆಗಳನ್ನು ತಿಳಿಸಿದ್ದಾರೆ. ಚಿತ್ರತಂಡದ ಕೆಲಸ ಸುಸ್ಥಿರ ಅಭಿವೃದ್ಧಿ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಪ್ರಾಮುಖ್ಯತೆಯನ್ನು ಅದ್ಭುತವಾಗಿ ಎತ್ತಿ ತೋರಿಸಿದೆ ಎಂದು ಪ್ರಧಾನಿ ಮೆಚ್ಚಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!