ಗಣರಾಜ್ಯೋತ್ಸವದಲ್ಲಿ ಪ್ರಧಾನಿ ಹೊಸ ಲುಕ್:‌ ಭಾರತದ ವೈವಿಧ್ಯಮಯ ಸಂಸ್ಕೃತಿ ಹೋಲುವ ಉಡುಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಭಾರತದ 74 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ವೈವಿಧ್ಯಮಯ ಸಂಸ್ಕೃತಿಯನ್ನು ಆಚರಿಸಿದ್ದಾರೆ. ಈ ವರ್ಷ ಭಾರತದ ವೈವಿಧ್ಯತೆಯನ್ನು ಸಂಕೇತಿಸಲು ಬಹು-ಬಣ್ಣದ ರಾಜಸ್ಥಾನಿ ಪೇಟವನ್ನು ಧರಿಸಿದರು.
ಗಣರಾಜ್ಯೋತ್ಸವ ಪರೇಡ್‌ಗೂ ಮುನ್ನ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸುತ್ತಿದ್ದಂತೆ ಅವರ ಉಡುಪಿನ ಫಸ್ಟ್ ಲುಕ್ ಬಹಿರಂಗವಾಯಿತು.

ವಿಶಿಷ್ಟವಾದ ಪೇಟದ ಜೊತೆಗೆ ಅವರು ಕಪ್ಪು ಕೋಟ್ ಮತ್ತು ಬಿಳಿ ಪ್ಯಾಂಟ್‌ನೊಂದಿಗೆ ಬಿಳಿ ಕುರ್ತಾವನ್ನು ಧರಿಸಿದ್ದರು. ಪಿಎಂ ಅವರ ಕುತ್ತಿಗೆಯಲ್ಲಿ ಬಿಳಿ ಸ್ಟೋಲ್ ಕೂಡ ಇತ್ತು. ಪ್ರಧಾನಿ ಮೋದಿ ಅವರ ಹೊಸ ಲುಕ್‌ ಎಲ್ಲರನ್ನು ಆಕರ್ಷಿಸಿತು.

ಕಳೆದ ವರ್ಷ, ಪ್ರಧಾನಮಂತ್ರಿಯವರು ವಿಶಿಷ್ಟವಾದ ಉತ್ತರಾಖಂಡದ ಸಾಂಪ್ರದಾಯಿಕ ಕ್ಯಾಪ್ ಅನ್ನು ಧರಿಸಿದ್ದರು, ಇದನ್ನು ಬ್ರಹ್ಮಕಮಲ-ಪ್ರೇರಿತ ಬ್ರೂಚ್‌ನಿಂದ ಅಲಂಕರಿಸಲಾಗಿತ್ತು. ಬ್ರಹ್ಮಕಮಲವು ಉತ್ತರಾಖಂಡದ ರಾಜ್ಯ ಪುಷ್ಪವಾಗಿದ್ದು, ಪ್ರಧಾನಮಂತ್ರಿ ಅವರು ಕೇದಾರನಾಥಕ್ಕೆ ಪೂಜೆಗೆ ಭೇಟಿ ನೀಡಿದಾಗ ಬಳಸುತ್ತಾರೆ. ಪ್ರಧಾನಿ ಮೋದಿ ಅವರ ಉಡುಗೆಯು ಉತ್ತರಾಖಂಡ ಮತ್ತು ಮಣಿಪುರದ ವಿಶಿಷ್ಟ ಸ್ಪರ್ಶವನ್ನು ಹೊಂದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!