ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರಯಾನ-3ರ ಮಿಷನ್ ಯಾವುದೇ ಅಡೆತಡೆಯಿಲ್ಲದೆ ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿದೆ. ಈ ದಿನವನ್ನು ನಾವು ʻರಾಷ್ಟ್ರೀಯ ಬಾಹ್ಯಾಕಾಶ ದಿನʼವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದರು. ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ವಿಜ್ಞಾನಿಗಳೊಂದಿಗೆ ಮಾತನಾಡಿದ ಅವರು, “ಭಾರತದ ಪ್ರತಿಯೊಂದು ಪ್ರಯತ್ನಕ್ಕೂ ಇದು ಸ್ಫೂರ್ತಿಯಾಗಲಿದೆ. ಯಾವುದೇ ವೈಫಲ್ಯವು ಅಂತಿಮವಲ್ಲ ಎಂಬುದನ್ನು ಚಂದ್ರಯಾನ ನಮಗೆ ನೆನಪಿಸುತ್ತದೆ”ಎಂದರು.
“ಆಗಸ್ಟ್ 23 ರಂದು, ಭಾರತವು ಚಂದ್ರನ ಮೇಲೆ ಧ್ವಜವನ್ನು ಹಾರಿಸಿತು, ಇಂದಿನಿಂದ ಆ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಕರೆಯಲಾಗುತ್ತದೆ”ಎಂದರು. ಇಂದು, ನಾನು ನಿಮ್ಮ ನಡುವೆ ಹೊಸ ರೀತಿಯ ಸಂತೋಷವನ್ನು ಅನುಭವಿಸುತ್ತಿದ್ದೇನೆ. ಆಗಸ್ಟ್ 23ರ ಆ ದಿನದ ಪ್ರತಿ ಸೆಕೆಂಡ್ ಅನ್ನು ನಾನು ನನ್ನ ಕಣ್ಣ ರೆಪ್ಪೆ ಮಿಟುಕಿಸದೆ ಎದುರು ನೋಡುತ್ತಿದ್ದೆ ಎಂದು ಚಂದ್ರಯಾನ-3 ರ ಅಂತಿಮ 15 ಸವಾಲಿನ ನಿಮಿಷಗಳನ್ನು ನೆನಪಿಸಿಕೊಳ್ಳುತ್ತಾ ಪ್ರಧಾನಿ ಮೋದಿ ಹೇಳಿದರು.
“ನಿಮ್ಮ ಸಮರ್ಪಣೆಗೆ, ನಿಮ್ಮ ತಾಳ್ಮೆಗೆ, ನಿಮ್ಮ ಕಠಿಣ ಪರಿಶ್ರಮಕ್ಕೆ, ನಿಮ್ಮ ಸ್ಫೂರ್ತಿಗೆ ನಾನು ನಮಸ್ಕರಿಸುತ್ತೇನೆ” ಎಂದು ಪ್ರಧಾನಿ ಮೋದಿ ಭಾವುಕರಾಗಿ ಹೇಳಿದರು.
ಅದೇ ರೀತಿ..ಚಂದ್ರಯಾನ-2 ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿದ ಚಂದ್ರನ ಮೇಲ್ಮೈಯಲ್ಲಿರುವ ತಾಣವನ್ನು ‘ತಿರಂಗಾ’ ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ಹೇಳಿದರು. ಇದು ಭಾರತದ ಪ್ರತಿಯೊಂದು ಪ್ರಯತ್ನಕ್ಕೂ ಸ್ಫೂರ್ತಿಯಾಗಲಿದೆ. ಯಾವುದೇ ವೈಫಲ್ಯವು ಅಂತಿಮವಲ್ಲ ಎಂಬುದನ್ನು ನಮಗೆ ಸಾರಿ ಹೇಳುತ್ತದೆ ಎಂದರು.