ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ವಿಳಿಂಜಂ ಬಂದರಿನಲ್ಲಿ ಭಾರತದ ಮೊದಲ ಅಂತಾರಾಷ್ಟ್ರೀಯ ಟ್ರಾನ್ಸ್‌ಶಿಪ್‌ಮೆಂಟ್ ಹಬ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು.
ಇದು ಭಾರತದ ಕಡಲ ಉದ್ಯಮಗಳಲ್ಲಿ ಒಂದು ಮೈಲಿಗಲ್ಲಾಗಿದ್ದು, ತಿರುವನಂತಪುರಂನಲ್ಲಿರುವ ಈ ಆಳಸಮುದ್ರದ ಬಂದರು ಭಾರತದ ಮೊದಲ ಮೀಸಲಾದ ಕಂಟೇನರ್ ಟ್ರಾನ್ಸ್‌ಶಿಪ್‌ಮೆಂಟ್ ಕೇಂದ್ರವಾಗಿದೆ. ಇದು ದಕ್ಷಿಣ ರಾಜ್ಯಗಳನ್ನು ಜಾಗತಿಕ ನೌಕಾ ನಕ್ಷೆಯಲ್ಲಿ ಇರಿಸುತ್ತದೆ.
ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್ ಸುಮಾರು 8,867 ಕೋಟಿ ರೂ. ವೆಚ್ಚದಲ್ಲಿ, ಸಾರ್ವಜನಿಕ-ಖಾಸಗಿ ಮಾದರಿಯ ಅಡಿಯಲ್ಲಿ ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ. ಇದು ಜಾಗತಿಕ ಹಡಗು ಮತ್ತು ವ್ಯಾಪಾರ ಮಾರ್ಗಗಳಲ್ಲಿ ಭಾರತದ ಉಪಸ್ಥಿತಿಯನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಉದ್ದೇಶಿಸಿ ಮಾತನಾಡಿ, ನೀವು ಇಂಡಿ ಮೈತ್ರಿಕೂಟದ ಬಲವಾದ ಆಧಾರಸ್ತಂಭ. ಶಶಿ ತರೂರ್ ಕೂಡ ಇಲ್ಲಿ ಕುಳಿತಿದ್ದಾರೆ. ಇಂದಿನ ಕಾರ್ಯಕ್ರಮವು ಅನೇಕ ಜನರ ನಿದ್ದೆಗೆಡಿಸಲಿದೆ ಎಂದು ನಗೆ ಚಟಾಕಿ ಹಾರಿಸಿದರು.