ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಮಾವೇಶವೊಂದರಲ್ಲಿ ʻಪಿಎಂ ಮೋದಿ ಈಸ್ ರೈಟ್ʼ ಎಂದು ಹಾಡಿ ಹೊಗಳಿದ್ದಾರೆ. ರಷ್ಯಾದ ವ್ಲಾಡಿವೋಸ್ಟಾಕ್‌ನಲ್ಲಿ ನಡೆದ 8ನೇ ಪೂರ್ವ ಆರ್ಥಿಕ ವೇದಿಕೆಯಲ್ಲಿ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಕುರಿತು ಪುಟಿನ್ ಮಾತನಾಡಿದರು. ಪ್ರಧಾನಿ ಮೋದಿ ಮೇಕ್ ಇನ್ ಇಂಡಿಯಾಗೆ ಹೆಚ್ಚು ಒತ್ತು ಕೊಡುತ್ತಿದ್ದು, ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾರು ತಯಾರಿಕೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಪುಟಿನ್ ಉತ್ತರಿಸಿದ್ದು ಹೀಗೆಯೇ..ದೇಶಿಯ ನಿರ್ಮಿತ ಆಟೋಮೊಬೈಲ್‌ಗಳನ್ನು ಬಳಸಬೇಕು ಎಂದ ಅವರು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತ ಈಗಾಗಲೇ ಈ ನೀತಿಯನ್ನು ಅನುಸರಿಸುತ್ತಿದೆ ಎಂದರು. ಆ ದೇಶದಲ್ಲಿ ನಿರ್ಮಿಸಲಾದ ಕಾರುಗಳ ಬಳಕೆಯ ಮೇಲೆ ಭಾರತ ಕೇಂದ್ರೀಕರಿಸಿದೆ ಎಂದು ಪುಟಿನ್ ಶ್ಲಾಘಿಸಿದರು. ಅಂತೆಯೇ, ರಷ್ಯಾದಲ್ಲಿ ತಯಾರಿಸಿದ ಆಟೋಮೊಬೈಲ್ಗಳನ್ನು ಬಳಸುವುದು ಉತ್ತಮ ಎಂಬುದನ್ನು ತಿಳಿಸಿದರು.
ಇತ್ತೀಚಿನ G20 ಸಭೆಯಲ್ಲಿ USA ಮತ್ತು ಸೌದಿ ಅರೇಬಿಯಾ, ಯುಎಇ, ಇಸ್ರೇಲ್, ಯುರೋಪ್ ಮತ್ತು ಭಾರತ ದೇಶಗಳು ಜಂಟಿಯಾಗಿ ‘ಭಾರತ-ಮಧ್ಯಪ್ರಾಚ್ಯ-ಯುರೋಪ್’ ಆರ್ಥಿಕ ಕಾರಿಡಾರ್ (ಐಎಂಇಸಿ) ಅನ್ನು ಪ್ರಾರಂಭಿಸಿದ್ದು, ಇದು ರಷ್ಯಾಕ್ಕೆ ಅಡ್ಡಿಯಾಗುವುದಿಲ್ಲ ಮತ್ತು ರಷ್ಯಾಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಪುಟಿನ್ ಹೇಳಿದರು.
ಈ ಆರ್ಥಿಕ ಕಾರಿಡಾರ್‌ಗೆ ಯುರೋಪಿಯನ್ ಯೂನಿಯನ್, ಸೌದಿ ಅರೇಬಿಯಾ ಮತ್ತು ಭಾರತ ಒಪ್ಪಿಗೆ ನೀಡಿದ ನಂತರ, ಅಂತಿಮವಾಗಿ ಯುನೈಟೆಡ್ ಸ್ಟೇಟ್ಸ್ ಸೇರಿಕೊಂಡಿದೆ ಎಂದು ಪುಟಿನ್ ಬಹಿರಂಗಪಡಿಸಿದರು. ಈ ಯೋಜನೆ ಹಲವು ವರ್ಷಗಳಿಂದ ಚರ್ಚೆಯಲ್ಲಿದ್ದು, G20 ವೇದಿಕೆಯಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಕುರಿತು ವಿವಿಧ ದೇಶಗಳು ಒಪ್ಪಂದವನ್ನು ಪ್ರಕಟಿಸಿರುವುದಾಗಿ ತಿಳಿಸಿದರು.