PARENTING | ಮಕ್ಕಳ್ಯಾಕೆ ಸುಳ್ಳು ಹೇಳೋದು ಕಲೀತಾರೆ? ಎಲ್ಲದಕ್ಕೂ ಪೋಷಕರೇ ಕಾರಣ?

-ಮೇಘನಾ ಶೆಟ್ಟಿ, ಶಿವಮೊಗ್ಗ

ಮಕ್ಕಳು ದೊಡ್ಡವರನ್ನು ನೋಡಿಯೇ ಎಲ್ಲವನ್ನೂ ಕಲಿತುಕೊಳ್ತಾರೆ. ನೀವು ಹೇಳಿಕೊಟ್ಟ ವಿಷಯಗಳ ಮೇಲೆ ಸ್ವಲ್ಪ ಗಮನ ಇದ್ರೆ ಹೇಳಿಕೊಡದ ವಿಷಯಗಳ ಮೇಲೆ ಸಾಕಷ್ಟು ಗಮನ ಇಡ್ತಾರೆ.

Think you can tell when your kid is lying? Think again | Science | AAASಮಕ್ಕಳು ಚಾಕೋಲೆಟ್ ತಿನ್ನೋದಕ್ಕೆ ಅಮ್ಮ ಬೇಡ ಅಂದ್ರೆ ಅಜ್ಜಿ ಒಕೆ ಅಂದಿರ‍್ತಾರೆ, ಆದರೆ ಅಮ್ಮ ಕೇಳಿದ್ರೆ ‘ತಿಂದಿಲ್ಲ’ ಎಂದು ಹೇಳು ಎಂದು ಹೇಳಿಕೊಟ್ಟಿರ‍್ತಾರೆ, ಇನ್ನು ಅಮ್ಮನೇ ಮನೆಯಲ್ಲಿ ‘ಚಿಕನ್ ಸಾಂಬಾರ್ ಮಾಡಿದ್ವಿ ಅಂತ ಚಿಕ್ಕಮ್ಮನಿಗೆ ಹೇಳ್ಬೇಡ, ಕರ‍್ದಿಲ್ಲ ಅಂತ ಬೇಜಾರ್ ಮಾಡ್ಕೋತಾರೆ’ ಎಂದು ಹೇಳಿಕೊಟ್ಟಿರ‍್ತಾರೆ. ಮಕ್ಕಳ ಹೋಮ್‌ವರ್ಕ್ ಮಾಡಿಸೋಕೆ ಮರೆತ ಅಪ್ಪ ಬೆಳಗ್ಗೆ ಮಗಳನ್ನು ಶಾಲೆಗೆ ಕಳಿಸುವಾಗ ‘ಹುಷಾರಿರಲಿಲ್ಲ ಅದ್ಕೆ ಹೋಮ್ ವರ್ಕ್ ಮಾಡಿಲ್ಲ’ ಎಂದು ಹೇಳು ಎಂದು ಹೇಳಿಕೊಡ್ತಾರೆ, ಟ್ರಿಪ್ ಹೋಗೋಕೆ ರಜ ಕೊಡೋದಿಲ್ಲ ಎಂದು ಕೆಮ್ಮುತ್ತಾ ‘ಹುಷಾರಿಲ್ಲ ಸರ್’ ಎಂದು ಬಾಸ್‌ಗೆ ಅಮ್ಮ ಫೋನ್ ಮಾಡಿದ್ದನ್ನು ಮಗಳು ನೋಡಿರುತ್ತಾಳೆ. ಇನ್ನೊಂದು ಉದಾಹರಣೆ ಕೊಡ್ತೇನೆ, ಮಿಸ್ ಆಗಿ ಕೈ ಜಾರಿ ಗಾಜಿನ ಲೋಟ ಒಡೆದು ಹೋದಾಗ ಸದ್ದಿಲ್ಲದೆ ಅದನ್ನು ಬಿಸಾಡಿರ‍್ತೀರಿ, ದೊಡ್ಡವರು ಬೈತಾರಲ್ಲ ಅಂತ ಮಕ್ಕಳೆದುರು ನಾನಲ್ಲ ಒಡೆದದ್ದು ಎಂದು ಹೇಳಿರ‍್ತೀರಿ..

Kids & Lying: Children Who Lie & The Parents Who Love Them | Parenting | 30Seconds Momಹೀಗೆ ಈ ರೀತಿ ಹೇಳ್ಕೋತಾ ಹೋದ್ರೆ ಸಾವಿರ ಸಂಗತಿಗಳಿವೆ. ಆದರೆ ಮಕ್ಕಳು ಸುಳ್ಳು ಹೇಳೋಕೆ ಕೆಲವೊಮ್ಮೆ ನೇರವಾಗಿ, ಕೆಲವೊಮ್ಮ ಪರೋಕ್ಷವಾಗಿ, ಒಟ್ಟಾರೆ ನೀವೇ ಕಾರಣ ಅನ್ನೋದಂತೂ ಗ್ಯಾರೆಂಟಿ ಆಯ್ತಲ್ಲಾ?

Lies & lying: what to do when children lie | Raising Children Networkಸಾಮಾನ್ಯವಾಗಿ ಮಕ್ಕಳು ಮೂರು ವರ್ಷಕ್ಕೆ ಕಾಲಿಟ್ಟ ನಂತರದಿಂದ ಸುಳ್ಳು ಹೇಳೋಕೆ ಶುರು ಮಾಡ್ತಾರೆ, ಇನ್ನು ನಾಲ್ಕನೇ ವರ್ಷಕ್ಕೆ ಕಾಲಿಟ್ಟ ನಂತರ ನಿಜ ಎನಿಸುವ ಸುಳ್ಳುಗಳನ್ನು ಮುಖದ ಭಾವನೆಗಳಿಗೆ ಮ್ಯಾಚ್ ಮಾಡಿ ಸುಳ್ಳು ಹೇಳ್ತಾರೆ.

ಮಕ್ಕಳ್ಯಾಕೆ ಸುಳ್ಳು ಹೇಳ್ತಾರೆ?

  • ಬೈಸಿಕೊಳ್ಳೋದು, ಹೊಡೆಸಿಕೊಳ್ಳೋದು ಯಾಕೆ ಸುಳ್ಳು ಹೇಳಿ ಮುಚ್ಚಿಹಾಕೋಣ ಎಂಬ ಭಾವನೆ
  • ಕೆಲವೊಮ್ಮೆ ಸುಳ್ಳು ಹೇಳಿದರೆ ನೀವು ನಂಬ್ತೀರಾ? ಯಾವ ರೀತಿ ಸುಳ್ಳು ವರ್ಕೌಟ್ ಆಗತ್ತೆ ಅಂತ ತಿಳ್ಕೊಳ್ಳೋದಕ್ಕೂ ಸುಳ್ಳು ಹೇಳ್ತಾರೆ.
  • ಮಕ್ಕಳಿಗೆ ಕಥೆ ಹೇಳೋದು ಭಾರೀ ಖುಷಿ, ಕಣ್ಣೆದುರೇ ಎಡವಿ ಬಿದ್ದಿರ‍್ತಾರೆ, ಆದರೆ ಸ್ನೇಹಿತ ದಬ್ಬಿದ ಅಂತ ಎಕ್ಸಾಜುರೇಟ್ ಮಾಡಿ ಹೇಳೋದು ಅವರಿಗಿಷ್ಟ, ಕಥೆ ಇಂಪ್ರೂವ್ ಮಾಡೋಕೆ ಸುಳ್ಳುಗಳನ್ನು ಸೇರಿಸ್ಕೋತಾರೆ.
  • ನಿಮ್ಮ ಗಮನ ಸೆಳೆಯೋದಕ್ಕೆ
  • ಏನಾದ್ರೂ ಬೇಕು ಎಂದು ಮನಸ್ಸು ಮಾಡಿದಾಗ ಅದಕ್ಕಾಗಿ ಏನಾದ್ರು ಸುಳ್ಳು ಹೇಳ್ತಾರೆ
  • ಅಮ್ಮ ಅಮ್ಮನಿಗೆ ಬೇಜಾರಾಗ್ಬೋದೇನೋ ಎಂದು
    ಸುಳ್ಳುಗಳನ್ನು ಕಡಿಮೆ ಮಾಡೋಕೆ ಹೀಗೆ ಮಾಡಿ..
  • ಮಕ್ಕಳ ಜೊತೆ ಮುಕ್ತವಾಗಿ ಮಾತನಾಡಿ, ಹಾಗಂತ ಸಣ್ಣ ತಪ್ಪಿಗೆ ಉದ್ದುದ್ದ ಭಾಷಣ ಮಾಡಬೇಡಿ, ‘ನಾನು ನಿನಗೆ ಸುಳ್ಳು ಹೇಳಿದ್ರೆ ನಿಂಗೆ ಹೇಗೆ ಅನಿಸತ್ತೆ?’ ಹೀಗೆ ಮಾತು ಆರಂಭಿಸಿ
  • ಸುಳ್ಳು ಹೇಳೋ ಸಂದರ್ಭವೇ ಬಾರದಂತೆ ನೋಡ್ಕೋಬೋದಲ್ವಾ? ಉದಾಹರಣೆಗೆ ನಿಮ್ಮ ಮಗು ಮಿಸ್ ಆಗಿ ಹಾಲು ಚೆಲ್ಲಿದೆ ಎಂದುಕೊಳ್ಳಿ, ‘ನೀನಾ ಹಾಲು ಚೆಲ್ಲಿದ್ದು? ಸರಿಯಾಗಿ ಕುಡಿಯೋಕಾಗೋದಿಲ್ವಾ?’ ಈ ರೀತಿ ಮಾತು ಶುರು ಮಾಡಿದ್ರೆ ಚೆಲ್ಲಿದ್ದು ನಾನಲ್ಲ ಎಂದುಬಿಡ್ತಾರೆ. ಆದರೆ ‘ಓ ಹಾಲು ಚೆಲ್ಲಿಹೋಗಿದೆ, ಇಟ್ಸ್ ಒಕೆ, ಬಾ ಇದನ್ನು ಕ್ಲೀನ್ ಮಾಡೋಣ’ ಎಂದು ಹೇಳಿ. ಎರಡಕ್ಕೂ ವ್ಯತ್ಯಾಸ ಇದೆ ಅಲ್ವಾ?
  • ನಿಮ್ಮ ಮಕ್ಕಳು ಸುಳ್ಳು ಹೇಳದೇ ಸತ್ಯ ಹೇಳಿದಾಗಲೆಲ್ಲಾ ಎನ್‌ಕರೇಜ್ ಮಾಡಿ, ‘ಒಳ್ಳೆದಾಯ್ತು ಪುಟ್ಟ ನಿಜ ಹೇಳಿದ್ದು, ಬಾ ಅದೇನು ಅಂತ ನೋಡಣ’ ಹೀಗೆ..
  • ನೀವು ಮೊದಲು ಸತ್ಯ ಹೇಳಿ, ಮಕ್ಕಳಿಗೆ ಕಾಣಿಸುವಂತೆ, ಕಾಣದಂತೆ ಒಟ್ಟಾರೆ ಸತ್ಯ ಹೇಳುವ ರೂಢಿ ಮಾಡಿಕೊಳ್ಳಿ, ‘ಇವತ್ತು ಕೆಲಸ ಮಾಡ್ತಾ ನಾನು ತಪ್ಪು ಮಾಡಿದೆ, ತಕ್ಷಣ ಬಾಸ್ ಹತ್ತಿರ ಹೋಗಿ ನನ್ನ ತಪ್ಪು ಹೇಳಿದೆ, ಸರಿ ಮಾಡೋಣ ಎಂದಿದ್ದಾರೆ’ ಈ ರೀತಿ ಮನೆಯಲ್ಲಿ ಮಾತನಾಡಿ..
  • ಮಕ್ಕಳು ತಪ್ಪನ್ನು ಬೇರೆ ಅವರ ಮೇಲೆ ಹಾಕೋದು ಸುಲಭ ಎಂದುಕೊಳ್ತಾರೆ, ‘ಪೆನ್ಸಿಲ್ ಮುರಿದಿದ್ದು ನಾನಲ್ಲ, ಟೆಡ್ಡಿ ಬೇರ್’ ಎಂದು ಅವರು ಹೇಳಿದಾಗ, ‘ಹೌದಾ, ಟೆಡ್ಡಿ ಬೇರ್ ಈ ರೀತಿ ಯಾಕೆ ಮಾಡ್ತು? ‘ ಹೀಗೆ ಅವರ ದಾರಿಯಲ್ಲೇ ಹೋಗಿ ಸತ್ಯ ಹೊರಬರುತ್ತದೆ.
  • ಕಥೆಗಳನ್ನು ಹೇಳಿ, ಸತ್ಯ ಹೇಳುವುದು ಯಾಕೆ ಮುಖ್ಯ ಎನ್ನುವ ಕಥೆಗಳನ್ನು ಮಕ್ಕಳಿಗೆ ಹೇಳಿಕೊಡಿ.

ಮಕ್ಕಳನ್ನು ಬೆಳೆಸುವುದು ಸುಲಭವಾದ ಮಾತಲ್ಲ, ಕೆಲವೊಮ್ಮೆ ನಿಮ್ಮಂತೆ ನೀವು ಇರುವಾಗ ಸುತ್ತಮುತ್ತ ಮಕ್ಕಳಿದ್ದಾರೆ ಎನ್ನುವುದು ಮರೆತೇ ಹೋಗುತ್ತಾರೆ. ನೀವು ಹೇಗೋ ನಿಮ್ಮ ಮಕ್ಕಳೂ ಹಾಗೆ, ಕೆಲವೊಂದನ್ನು ಎಷ್ಟೇ ದೊಡ್ಡವರಾದರೂ ಬದಲಾಯಿಸೋಕೆ ಆಗೋದಿಲ್ಲ. ಭವಿಷ್ಯದಲ್ಲಿ ನಿಮ್ಮ ಮಕ್ಕಳ ಜೀವನ ಉತ್ತಮವಾಗಿರಬೇಕಾದ್ರೆ ಒಳ್ಳೆಯ ರೀತಿಯಲ್ಲಿ ಮಕ್ಕಳನ್ನು ಬೆಳೆಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!