ಪ್ರಧಾನಿ ಮೋದಿ ಭಾರತದ ಮುಖ: ಅಮೆರಿಕ ಸಂಸದ ಬ್ರಾಡ್‌ ಶೇರ್ಮನ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಪ್ರಧಾನಿ ಮೋದಿ ಭವಿಷ್ಯದಲ್ಲಿ ಭಾರತದ ಮುಖವಾಗಲಿದ್ದಾರೆ ಎಂದು ಅಮೆರಿಕದ ಹಿರಿಯ ಸಂಸದ ಬ್ರಾಡ್‌ ಶೇರ್ಮನ್‌ ಹೇಳಿದ್ದಾರೆ.

ನರೇಂದ್ರ ಮೋದಿ ಅವರು 2014ರಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಮತ್ತು ದೇಶದ ಆರ್ಥಿಕ ಪ್ರಗತಿಯನ್ನು ಶ್ಲಾಘಿಸಿದ ಅವರು, ಅವರ ಆಡಳಿತ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ದ್ವಿಪಕ್ಷೀಯ ಸಂಬಂಧ ವೃದ್ಧಿಸಿದೆ. ಆದರೆ, ಭಾರತ-ರಷ್ಯಾ ನಡುವಿನ ರಕ್ಷಣಾ ಸಂಬಂಧವು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಸವಾಲಾಗಿದೆ’ ಎಂದು ಹೇಳಿದರು.

‘ಮೋದಿ ಅವರು ಭವಿಷ್ಯದಲ್ಲಿ ಭಾರತದ ಮುಖವಾಗಲಿದ್ದಾರೆ. ದೇಶದ ಆರ್ಥಿಕತೆಯು ಪ್ರಗತಿ ಹೊಂದುತ್ತಿರುವುದನ್ನು ಕಾಣುತ್ತಿದ್ದೇವೆ. ನಿಜ, ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಸವಾಲುಗಳಿರುತ್ತವೆ. ಪ್ರತಿ ನಾಯಕನಿಗೂ ಸವಾಲುಗಳಿರುತ್ತವೆ. ಹಾಗಂತ ಇಡೀ ದೇಶದ ಯಶಸ್ಸಿಗೆ ಒಬ್ಬ ವ್ಯಕ್ತಿ ಕಾರಣ ಎಂದು ಹೇಳುವುದಿಲ್ಲ. ಭಾರತದಲ್ಲಿ 130 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಅವರೆಲ್ಲರೂ ದೇಶಕ್ಕಾಗಿ ದುಡಿಯುತ್ತಿದ್ದಾರೆ’ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!