Saturday, December 9, 2023

Latest Posts

ಭಾರತದ ಮೊದಲ ಇಂಟರ್‌ಸಿಟಿ ರ‍್ಯಾಪಿಡ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಕಾರಿಡಾರ್ ಅನ್ನು ಪ್ರಾರಂಭಿಸುವ ಮೂಲಕ ಭಾರತದ ಮೊದಲ ಇಂಟರ್‌ಸಿಟಿ ರ‍್ಯಾಪಿಡ್ ರೈಲಾದ ‘ರಾಪಿಡ್‌ಎಕ್ಸ್’ಗೆ (RAPIDX) ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ.

ಕ್ಷಿಪ್ರವಾಗಿ ಉಪ ನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲಿಗೆ ‘ನಮೋ ಭಾರತ್’‌ ಎಂದು ನಾಮಕರಣ ಮಾಡಲಾಗಿದ್ದು, ಇದು ಸಾಹಿಬಾಬಾದ್‌ನಿಂದ ದುಹೈ ಡಿಪೋಗೆ ಸಂಪರ್ಕ ಕಲ್ಪಿಸುತ್ತದೆ.

ಪ್ರಮುಖ ನಗರಗಳನ್ನು ಸೇರಿಸುವ ರೈಲು ಯೋಜನೆ ಇದಾಗಿದ್ದು, ಇಲ್ಲಿ ರೈಲುಗಳು ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಮೂಲಕ ತ್ವರಿತವಾಗಿ ಪ್ರಯಾಣಿಕರನ್ನು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕೊಂಡೊಯ್ಯಲಿವೆ. ಮೊದಲ ಹಂತದ ದೆಹಲಿ ಮತ್ತು ಗಾಜಿಯಾಬಾದ್‌ ನಡುವಿನ 17 ಕಿ.ಮೀ. ಮಾರ್ಗವನ್ನು ಉದ್ಘಾಟಿಸಲಾಗಿದ್ದು, ಇದರಲ್ಲಿ ಶಹೀಬಾಬಾದ್‌, ಗಾಜಿಯಾಬಾದ್‌, ಗುಲ್ದಾರ್‌, ದುಹೈ ಮತ್ತು ದುಹೈ ಡಿಪೋದಲ್ಲಿ ನಿಲ್ದಾಣಗಳನ್ನು ಒಳಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!