ಲತಾ ದೀದಿ ಅಗಲಿಕೆಯ ನೋವು ಶಬ್ದಗಳಲ್ಲಿ ವಿವರಿಸಲಾಗದು: ಪ್ರಧಾನಿ ಮೋದಿ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರು ಇಂದು ಕೊನಡಯುಸಿರೆಳೆದುದ್ದು, ಲತಾ ದೀದಿ ಅವರ ನಿಧನಕ್ಕೆ ಪ್ರಧಾನಿ ಮೋದಿ ಸರಣಿ ಟ್ವೀಟ್‌ ಗಳ ಮೂಲಕ ಸಂತಾಪ ಸೂಚಿಸಿದ್ದಾರೆ.
ಈ ವೇಳೆ ಪ್ರಧಾನಿ ಮೋದಿ ತಾವು ಲತಾ ಮಂಗೇಶ್ಕರ್‌ ಜತೆಗಿದ್ದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
‘ಕಾಳಜಿ ಹಾಗೂ ದಯೆಯ ಪ್ರತಿರೂಪವೇ ಆಗಿದ್ದ ಲತಾ ದೀದಿ ಅವರನ್ನು ಕಳೆದುಕೊಂಡ ದುಃಖವನ್ನು ಶಬ್ದದದಲ್ಲಿ ವಿವರಿಸಲಾಗುವುದಿಲ್ಲ. ಅವರ ಅಗಲಿಕೆಯಿಂದ ಉಂಟಾದ ಶೂನ್ಯವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅವರು ಭಾರತೀಯ ಸಂಸ್ಕೃತಿಯ ಪ್ರತಿನಿಧಿಯಾಗಿದ್ದರು. ತಮ್ಮ ಕಂಠದಿಂದ ಜನರನ್ನು ಮಂತ್ರಮುಗ್ದರನ್ನಾಗಿರುವ ಶಕ್ತಿ ಅವರಲ್ಲಿತ್ತು. ಮುಂದಿನ ಪೀಳಿಗೆಗೆ ಅವರು ಸದಾ ಪ್ರೇರಣೆಯಾಗಿರುತ್ತಾರೆ’ ಎಂದಿದ್ದಾರೆ.

‘ಲತಾ ದೀದಿಯವರ ಹಾಡುಗಳು ವಿವಿಧ ಭಾವನೆಗಳನ್ನು ಮೂಡಿಸುತ್ತವೆ. ಭಾರತೀಯ ಚಿತ್ರರಂಗದಲ್ಲಿ ದಶಕಗಳಿಂದ ಆದ ಪರಿವರ್ತನೆಯನ್ನು ಲತಾ ಮಂಗೇಶ್ಕರ್​ ತುಂಬ ಹತ್ತಿರದಿಂದ ನೋಡಿದ್ದಾರೆ. ಸಿನಿಮಾ ಕ್ಷೇತ್ರ ಹೊರತುಪಡಿಸಿ ಲತಾ ಅವರು ಭಾರತದ ಅಭಿವೃದ್ಧಿಯ ಕುರಿತು ತುಡಿತ ಹೊಂದಿದ್ದರು. ಭಾರತವನ್ನು ಒಂದು ಬಲಿಷ್ಠ, ಅಭಿವೃದ್ಧಿ ದೇಶವನ್ನಾಗಿ ನೋಡುವುದು ಅವರ ಅತಿದೊಡ್ಡ ಬಯಕೆಯಾಗಿತ್ತು’ ಎಂದು ಬರೆದುಕೊಂಡಿದ್ದಾರೆ.

‘ಲತಾ ದೀದಿಯಿಂದ ಹೆಚ್ಚು ಪ್ರೀತಿ ಪಡೆದಿದ್ದೇನೆ, ಅವರ ಪ್ರೀತಿಪಾತ್ರರಲ್ಲಿ ನಾನೂ ಒಬ್ಬ ಎಂದು ಹೇಳುವುದು ನನಗೆ ಹೆಮ್ಮೆ ಅನಿಸುತ್ತದೆ. ಅವರೊಂದಿಗೆ ನಾನು ಕಳೆದ ಕ್ಷಣಗಳು, ಆಡಿದ ಮಾತುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಕುಟುಂಬಸ್ಥರೊಂದಿಗೆ ಮಾತನಾಡಿ ಸಾಂತ್ವಾನ ಹೇಳಿದ್ದೇನೆ’. ಲತಾ ದೀದಿಯನ್ನು ಕಳೆದುಕೊಂಡ ದೇಶದ ಜನತೆಗೆ ಕೂಡ ಪ್ರಧಾನಿ ಮೋದಿ ಸಾಂತ್ವಾನ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!