ಇಸ್ರೇಲ್ ಅಧ್ಯಕ್ಷರ ಭೇಟಿಯಾದ ಪ್ರಧಾನಿ ಮೋದಿ: ಪ್ಯಾಲೆಸ್ತೀನ್ ಸಮಸ್ಯೆ ಪರಿಹಾರಕ್ಕೆ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದುಬೈಯಲ್ಲಿ ನಡೆಯುತ್ತಿರುವ COP28 ವಿಶ್ವ ಹವಾಮಾನ ಆಕ್ಷನ್ ಶೃಂಗಸಭೆ(WCAS) ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರನ್ನು ಭೇಟಿಯಾದರು.

ಉಭಯ ನಾಯಕರು ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ವಕ್ತಾರರು ತಿಳಿಸಿದ್ದಾರೆ.

ಈ ವೇಳೆ ಪಿಎಂ ಮೋದಿ ಎರಡು ದೇಶಗಳ ಪರಿಹಾರಕ್ಕಾಗಿ ಭಾರತದ ಬೆಂಬಲದ ಬಗ್ಗೆ ಮಾಹಿತಿ ನೀಡಿದ್ದು, ‘ಇಸ್ರೇಲ್-ಪ್ಯಾಲೆಸ್ತೀನ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕರೆ ನೀಡಿದರು.ಪೀಡಿತ ಜನರಿಗೆ ಮಾನವೀಯ ನೆರವಿನ ಮತ್ತು ಸುರಕ್ಷಿತ ವಿತರಣೆಯ ಅಗತ್ಯವನ್ನು ಮೋದಿ ಪುನರುಚ್ಚರಿಸಿದರು. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಎರಡು ದೇಶಗಳ ನಡುವೆ ಪರಿಹಾರ ಸೂತ್ರಕ್ಕೆ ಸಲಹೆ ನೀಡಿದ್ದಾರೆ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!