ಪ್ರಧಾನಿ ಮೋದಿ OBC ಕುಟುಂಬದಲ್ಲಿ ಜನಿಸಿಲ್ಲ, ದೇಶಕ್ಕೆ ಸುಳ್ಳು ಹೇಳಿದ್ದಾರೆ: ರಾಹುಲ್‌ ಗಾಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ (Narendra Modi) ಹಿಂದುಳಿದ ವರ್ಗದ (OBC) ಕುಟುಂಬದಲ್ಲಿ ಜನಿಸಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಹೇಳಿದ್ದಾರೆ.

ಒಡಿಶಾದ (Odisha) ಜಾರಸುಗುಡದಲ್ಲಿ ಮಾತನಾಡಿದ ಅವರು, ಧಾನಿ ಮೋದಿ ಒಬಿಸಿ ವರ್ಗದಲ್ಲಿ ಹುಟ್ಟಿಲ್ಲ, ಅವರು ಗುಜರಾತ್‌ನಲ್ಲಿ ತೆಲಿ ಜಾತಿಯಲ್ಲಿ ಜನಿಸಿದರು, ಸಮುದಾಯಕ್ಕೆ 2000 ರಲ್ಲಿ ಬಿಜೆಪಿ ಒಬಿಸಿ ಟ್ಯಾಗ್ ನೀಡಿತು. ಅವರು ಜನರಲ್ ಕೆಟಗರಿಯಲ್ಲಿ ಜನಿಸಿದರು. ಅವರು ಒಬಿಸಿಯಲ್ಲಿ ಹುಟ್ಟಿಲ್ಲ, ಸಾಮಾನ್ಯ ಜಾತಿಯಲ್ಲಿ ಜನಿಸಿದ ಕಾರಣ ಅವರು ತಮ್ಮ ಇಡೀ ಜೀವನದಲ್ಲಿ ಜಾತಿ ಗಣತಿಯನ್ನು ನಡೆಸಲು ಬಿಡುವುದಿಲ್ಲ ಆರೋಪಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ನಿಮ್ಮ ಬಳಿ ಬಂದಾಗಲೆಲ್ಲಾ ಒಂದು ಮಾತು ಹೇಳಿ, ನಮ್ಮ ಪ್ರಧಾನಿಯವರು ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಇಡೀ ದೇಶಕ್ಕೆ ಸುಳ್ಳು ಹೇಳಿದ್ದಾರೆ, ಅವರು ಹಿಂದುಳಿದ ವರ್ಗದಲ್ಲಿ ಹುಟ್ಟಿಲ್ಲ, ಅವರು ಸಾಮಾನ್ಯ ಜಾತಿಗೆ ಸೇರಿದವರು, ಇದನ್ನು ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!