ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಇಂದು ಕಾಶಿಗೆ ಭೇಟಿ ನೀಡಿದ್ದು, ವಿಶ್ವನಾಥನ ದರುಶನ ಪಡೆದಿದ್ದಾರೆ.
ಇಂದು ಸರ್ವಾರ್ಥ ಸಿದ್ಧಿ ಯೋಗ ಹಾಗೂ ತ್ರಯೋದಶಿ ತಿಥಿಯು ಅತ್ಯಂದ ಶುಭ ಸಂದರ್ಭವಾಗಿದ್ದು, ಈ ದಿನ ಕಾಶಿ ವಿಶ್ವನಾಥನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ಈ ದಿನದ ಮತ್ತೊಂದು ವಿಶೇಷತೆ ಎಂದರೆ ತ್ರಯೋದಶಿ ತಿಥಿ, ಶಿವನ ಆರಾಧನೆಗೆ ಈ ತಿಥಿಯು ಅತ್ಯಂತ ಪ್ರಿಯವಾಗಿದೆ. ಈ ಪುಣ್ಯಕಾಲದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದ್ದಾರೆ.
ಈ ದಿನದಂದು ಪೂಜೆ ಮಾಡಿದರೆ ಜೀವನದಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಪ್ರಧಾನಿ ಮೋದಿ ಶೋಡಶೋಪಚಾರ ಪೂಜೆಯು ಹದಿನಾರು ಹಂತದಲ್ಲಿ ನಡೆಯುತ್ತದೆ. ಈ ಪೂಜೆಯಲ್ಲಿ ದೇವರನ್ನು ಆಹ್ವಾನಿಸಿ ಆಸನ ನೀಡಲಾಗುತ್ತದೆ. ನಂತರ ಅಭಿಷೇಕ ನೆರವೇರುತ್ತದೆ.



