ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಕೆಚ್ಚೆದೆಯ ವೀರ ವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ನೆವಾಲ್ಕರ್ ಅವರ ಜನ್ಮದಿನ. ಜಯಂತೋತ್ಸವದ ಅಂಗವಾಗಿ ಲಕ್ಷ್ಮೀಬಾಯಿ ಶೌರ್ಯವನ್ನು ಸ್ಮರಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದರು.
“ಭಾರತೀಯ ಮಹಿಳಾ ಶಕ್ತಿಯ ಶೌರ್ಯದ ಸಂಕೇತವಾದ ರಾಣಿ ಲಕ್ಷ್ಮೀಬಾಯಿ ಅವರ ಜನ್ಮ ವಾರ್ಷಿಕೋತ್ಸವದಂದು ನನ್ನ ಹೃತ್ಪೂರ್ವಕ ನಮನಗಳು. ಅವರ ಧೈರ್ಯ, ಹೋರಾಟ ಮತ್ತು ತ್ಯಾಗದ ಕಥೆ. ವಿದೇಶಿ ಆಡಳಿತದ ದುಷ್ಕೃತ್ಯಗಳ ವಿರುದ್ಧ ದೇಶದ ಪ್ರತಿ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ” ಎಂದು ಟ್ವೀಟ್ ಮೂಲಕ ಸ್ಮರಿಸಿದ್ದಾರೆ.
ರಾಣಿ ಲಕ್ಷ್ಮೀಬಾಯಿ, ಝಾನ್ಸಿ ರಾಣಿ ಎಂದೇ ಜನಪ್ರಿಯರಾದ ಇವರು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ (1857-58) ಪ್ರಮುಖ ಪಾತ್ರ ವಹಿಸಿದರು. 1857ರ ಭಾರತೀಯ ದಂಗೆಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ರಾಣಿ ಲಕ್ಷ್ಮೀಬಾಯಿ ಅವರು ನವೆಂಬರ್ 19, 1828 ರಂದು ಜನಿಸಿದರು.
ರಾಣಿ ಲಕ್ಷ್ಮೀಬಾಯಿ 1858 ರಲ್ಲಿ ಕೋಟಾ-ಕಿ-ಸೆರೈ ಎಂದು ಕರೆಯಲ್ಪಡುವ ಸ್ಥಳದಲ್ಲಿ ಗ್ವಾಲಿಯರ್ ಬಳಿ ಬ್ರಿಟಿಷ್ ವಸಾಹತುಶಾಹಿ ಆಡಳಿತಗಾರರ ವಿರುದ್ಧ ಹೋರಾಡಿ ಜೂನ್ 17, 1858 ರಂದು ನಿಧನರಾದರು.