ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ. ಅವರ 148ನೇ ಜನ್ಮದಿನದಂದು ಉಕ್ಕಿನ ಮನುಷ್ಯನನ್ನು ಸ್ಮರಿಸಿದ ಪ್ರಧಾನಿ, ಅವರ ʻಸೇವೆಗೆ ದೇಶವು ಸದಾ ಋಣಿʼಯಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.
“ಸರ್ದಾರ್ ಪಟೇಲ್ ಅವರ ಜಯಂತಿಯಂದು, ಅವರ ಅದಮ್ಯ ಮನೋಭಾವ, ದೂರದೃಷ್ಟಿಯ ರಾಜನೀತಿ ಮತ್ತು ಅವರು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸಿದ ಅಸಾಧಾರಣ ಸಮರ್ಪಣೆಯನ್ನು ನಾವು ಸ್ಮರಿಸುತ್ತೇವೆ. ರಾಷ್ಟ್ರೀಯ ಏಕೀಕರಣಕ್ಕೆ ಅವರ ಬದ್ಧತೆಯು ನಮಗೆ ಮಾರ್ಗದರ್ಶನ ನೀಡುತ್ತಲೇ ಇದೆ. ಅವರ ಸೇವೆಗೆ ನಾವು ಸದಾ ಋಣಿಯಾಗಿದ್ದೇವೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಗುಜರಾತ್‌ನ ಕೆವಾಡಿಯಾದಲ್ಲಿರುವ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆಗೆ ಪುಷ್ಪ ಪ್ರಧಾನಿ ನಮನ ಸಲ್ಲಿಸಿದರು. ಬಳಿಕ
ರಾಷ್ಟ್ರೀಯ ಏಕತಾ ದಿವಸ್ ಪರೇಡ್ ವೀಕ್ಷಿಸಿದರು. ಬಿಎಸ್‌ಎಫ್ ಮತ್ತು ವಿವಿಧ ರಾಜ್ಯ ಪೊಲೀಸರು ಸಾಹಸ ಪ್ರದರ್ಶನಗಳನ್ನು ನೀಡಿದರು.
#WATCH | PM Modi pays tributes to Sardar Vallabhbhai Patel on his birth anniversary pic.twitter.com/K2rXhxUcfh
— ANI (@ANI) October 31, 2023
2014ರಿಂದ ಅಕ್ಟೋಬರ್ 31ರಂದು ಪ್ರತಿವರ್ಷ ʻರಾಷ್ಟ್ರೀಯ ಏಕತಾ ದಿನ ಅಥವಾ ರಾಷ್ಟ್ರೀಯ ಏಕತಾ ದಿವಸ್ʼ ಅನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇಶದಾದ್ಯಂತ ‘ರನ್ ಫಾರ್ ಯೂನಿಟಿ’ ಆಯೋಜಿಸಲಾಗುತ್ತದೆ.
ಭಾರತ ಗಣರಾಜ್ಯವನ್ನು ನಿರ್ಮಿಸಲು ಸ್ವತಂತ್ರ ಪೂರ್ವ ದೇಶದ ಎಲ್ಲಾ 562 ರಾಜಪ್ರಭುತ್ವದ ರಾಜ್ಯಗಳನ್ನು ಒಂದುಗೂಡಿಸಿದ ಕೀರ್ತಿಗೆ ಪಾತ್ರರಾದ ಸರ್ದಾರ್ ಪಟೇಲ್ ಅವರ ನೆನಪಿಗಾಗಿ ಈ ದಿನವನ್ನು ದೇಶಾದ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತದೆ.