ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ದ್ರೌಪದಿ ಮುರ್ಮು ಅವರು ಮಧ್ಯಮ ವರ್ಗದ ಬಗ್ಗೆ ಪ್ರಸ್ತಾಪಿಸಿದ್ದು, 2025 ರ ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಹಲವಾರು ಘೋಷಣೆಗಳು ಇರುತ್ತವೆ ಎಂಬ ನಿರೀಕ್ಷೆಯನ್ನು ಹೆಚ್ಚಿಸಿದೆ.
2025 ರ ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಮಾತನಾಡಿದ ಪ್ರಧಾನಿ ಮೋದಿ, “ದೇಶದ ಬಡವರು ಮತ್ತು ಮಧ್ಯಮ ವರ್ಗದವರು ಲಕ್ಷ್ಮೀದೇವಿಯಿಂದ ಆಶೀರ್ವದಿಸಲ್ಪಡಲಿ ಎಂದು ನಾನು ದೇವಿಯಲ್ಲಿ ಪ್ರಾರ್ಥಿಸುತ್ತೇನೆ” ಎಂದು ಸಂಸತ್ತಿನ ಹೊರಗೆ ಬಜೆಟ್ ಅಧಿವೇಶನದ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ಹೇಳಿದರು.
ದ್ರೌಪದಿ ಮುರ್ಮು ಅವರು ಮಧ್ಯಮ ವರ್ಗದ ಜನರ ವಸತಿ ಆಸ್ತಿಯನ್ನು ಹೊಂದುವ ಕನಸನ್ನು ನನಸಾಗಿಸಲು ಸರ್ಕಾರ ಬದ್ಧವಾಗಿದೆ ಮತ್ತು ಗೃಹ ಸಾಲದ ಮೇಲೆ ಬಡ್ಡಿ ಸಬ್ಸಿಡಿಯನ್ನು ನೀಡುತ್ತದೆ ಎಂದು ಸುಳಿವು ನೀಡಿದ್ದಾರೆ.