ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಬುಧಾಬಿಯಿಂದ ಪ್ರಧಾನಿ ಮೋದಿ ಕತಾರ್ ತಲುಪಿದ್ದು, ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಭಾರತ ಮತ್ತು ಕತಾರ್ ನಡುವಿನ ಸೌಹಾರ್ದ ಸಂಬಂಧ ವೃದ್ಧಿಗಾಗಿ ಪ್ರಧಾನಿ ಮೋದಿ ಕತಾರ್‌ಗೆ ಆಗಮಿಸಿದ್ದಾರೆ. ಕತಾರ್‌ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಸುಲ್ತಾನ್ ಬಿನ್ ಸಾದ್ ಅಲ್ ಮುರೈಖಿ ಪ್ರಧಾನಿ ಅವರನ್ನು ಸ್ವಾಗತಿಸಿದ್ದಾರೆ.
2014ರಲ್ಲಿ ಪ್ರಧಾನಿ ಮೋದಿ ಕತಾರ್‌ಗೆ ಭೇಟಿ ನೀಡಿದ್ದರು. ಅದಾದ 10 ವರ್ಷಗಳ ಬಳಿಕ ಪ್ರಧಾನಿ ಕತಾರ್‌ಗೆ ಭೇಟಿ ನೀಡಿದ್ದಾರೆ.