ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಇಂದಿನಿಂದ ಎರಡು ದಿನಗಳ ಕಾಲ ಥೈಲ್ಯಾಂಡ್ ಹಾಗೂ ಶ್ರೀಲಂಕಾದ ಪ್ರವಾಸದಲ್ಲಿರಲಿದ್ದಾರೆ.
ಪ್ರಧಾನಿ ಮೋದಿ ಅವರು ಬ್ಯಾಂಕಾಕ್‌ನಲ್ಲಿ ಪ್ರಧಾನಿ ಪಟೊಂಗ್‌ಟಾರ್ನ್ ಶಿನವಾತ್ರ ಅವರೊಂದಿಗೆ ಮಾತುಕತೆ ನಡೆಸಲಿದ್ದು, ಅಲ್ಲಿ ವ್ಯಾಪಾರ ವಿಷಯಗಳ ಕುರಿತು ಪ್ರಮುಖ ಚರ್ಚೆಗಳು ನಡೆಯಬಹುದು. ಏಪ್ರಿಲ್ 4, 2025 ರಂದು ನಡೆಯಲಿರುವ 6 ನೇ BIMSTEC ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ಥೈಲ್ಯಾಂಡ್ 6 ನೇ BIMSTEC ಶೃಂಗಸಭೆಯ ಅಧ್ಯಕ್ಷತೆ ವಹಿಸುತ್ತಿದೆ. ಇದು ಪ್ರಧಾನ ಮಂತ್ರಿಯವರ ಥೈಲ್ಯಾಂಡ್ ನ ಮೂರನೇ ಭೇಟಿಯಾಗಲಿದೆ.ಇದರೊಂದಿಗೆ ಪ್ರಧಾನಿ ಮೋದಿ ಶ್ರೀಲಂಕಾಕ್ಕೂ ಭೇಟಿ ನೀಡಲಿದ್ದಾರೆ. ಶ್ರೀಲಂಕಾ ಮತ್ತು ಥೈಲ್ಯಾಂಡ್ ಬಿಮ್‌ಸ್ಟೆಕ್‌ನ ಭಾಗವಾಗಿರುವುದರಿಂದ ಬಿಮ್‌ಸ್ಟೆಕ್ ದೃಷ್ಟಿಕೋನದಿಂದ ಪ್ರಧಾನಿ ಮೋದಿಯವರ ಎರಡೂ ದೇಶಗಳ ಭೇಟಿ ಬಹಳ ಮುಖ್ಯವಾಗಿದೆ.
ಬ್ಯಾಂಕಾಗ್ಗೆ ಬಂದಿಳಿದ ಪ್ರಧಾನಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಮೋದಿ ಮೋದಿ ಎಂದು ಜೈಖಾರ ಹಾಕುತ್ತಾ ಬ್ಯಾಂಕಾಂಕ್ ಜನತೆ ಬರಮಾಡಿಕೊಂಡಿದೆ. ಪ್ರಧಾನಿ ಮೋದಿ ಅವರು ಬ್ಯಾಂಕಾಕ್‌ನಲ್ಲಿ ಪ್ರಧಾನಿ ಪಟೊಂಗ್‌ಟಾರ್ನ್ ಶಿನವಾತ್ರ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.