ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಭೋಪಾಲ್‌ನ ರಾಣಿ ಕಮಲಾಪತಿ ನಿಲ್ದಾಣದಲ್ಲಿ ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದರು.
ಭೋಪಾಲ್ ಮತ್ತು ರಾಷ್ಟ್ರ ರಾಜಧಾನಿ ನಡುವಿನ 11 ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 7.45 ಗಂಟೆಗಳಲ್ಲಿ 708 ಕಿಮೀ ದೂರವನ್ನು ಕ್ರಮಿಸುತ್ತದೆ. ಐಆರ್‌ಸಿಟಿಸಿ ಪ್ರಕಾರ, ದೆಹಲಿ-ಭೋಪಾಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಶನಿವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ನಗರಗಳ ನಡುವೆ ಚಲಿಸುತ್ತದೆ. ರೈಲು ಬೆಳಗ್ಗೆ 5:40 ಕ್ಕೆ ಭೋಪಾಲ್‌ನಿಂದ ಹೊರಡಲಿದ್ದು.ಮಧ್ಯಾಹ್ನ 1:10 ಕ್ಕೆ ದೆಹಲಿಯ ನಿಜಾಮುದ್ದೀನ್ ನಿಲ್ದಾಣವನ್ನು ತಲುಪುತ್ತದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ದೇಶದಲ್ಲಿ ಪ್ರಯಾಣಿಕರ ಪ್ರಯಾಣದ ಅನುಭವವನ್ನು ಈಗಾಗಲೇ ಉತ್ತಮಗೊಳಿಸಿದೆ. ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣ ಮತ್ತು ದೆಹಲಿ ರೈಲು ನಿಲ್ದಾಣಗಳ ನಡುವೆ ಪರಿಚಯಿಸಲಾಗುತ್ತಿರುವ ಹೊಸ ರೈಲು ದೇಶದ ಹನ್ನೊಂದನೇ ವಂದೇ ಭಾರತ್ ರೈಲು ಆಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ರೈಲು ಆಗಿದ್ದು, ಸೆಟ್ ಅತ್ಯಾಧುನಿಕ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿದೆ.