ರಾಜಪಕ್ಸೆ- ಧವನ್ ಲಯಬದ್ಧ ಆಟ: ಕೆಕೆಆರ್‌ಗೆ 192 ಟಾರ್ಗೆಟ್ ನೀಡಿದ ಪಂಜಾಬ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಎರಡನೇ ಪಂದ್ಯದಲ್ಲಿ ಭಾನುಕಾ ರಾಜಪಕ್ಸೆ ಆಕರ್ಷಕ ಅರ್ಧಶತಕ ಹಾಗೂ ನಾಯಕ ಧವನ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಪಂಜಾಬ್‌ ಕಿಂಗ್ಸ್‌ ತಂಡವು 5 ವಿಕೆಟ್ ಕಳೆದುಕೊಂಡು 191 ರನ್‌ ಬಾರಿಸಿ ಕೋಲ್ಕತಾ ನೈಟ್‌ ರೈಡರ್ಸ್‌ಗೆ ಸವಾಲಿನ ಗುರಿ ನೀಡಿದೆ.

ಐಎಸ್ ಬಿಂದ್ರಾ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಕೋಲ್ಕತಾ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಪ್ರಭಸಿಮ್ರನ್ ಸಿಂಗ್ ಹಾಗೂ ನಾಯಕ ಶಿಖರ್ ಧವನ್ ಜೋಡಿ 23 ರನ್‌ಗಳ ಜತೆಯಾಟ ಒದಗಿಸಿಕೊಟ್ಟಿತು. ಪ್ರಭಸಿಮ್ರನ್ ಸಿಂಗ್ 2 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ಟಿಮ್ ಸೌಥಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಪ್ರಭಸಿಮ್ರನ್ ಸಿಂಗ್ ವಿಕೆಟ್ ಕಳೆದುಕೊಂಡ ಪಂಜಾಬ್ ತಂಡಕ್ಕೆ ಎರಡನೇ ವಿಕೆಟ್‌ಗೆ ನಾಯಕ ಶಿಖರ್ ಧವನ್ ಹಾಗೂ ಭಾನುಕಾ ರಾಜಪಕ್ಸೆ 55 ಎಸೆತಗಳನ್ನು ಎದುರಿಸಿ 86 ರನ್‌ಗಳ ಜತೆಯಾಟವಾಡಿತು. ಸ್ಪೋಟಕ ಬ್ಯಾಟಿಂಗ್ ನಡೆಸಿದ ರಾಜಪಕ್ಸೆ ಕೇವಲ 32 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್‌ ಬಾರಿಸಿ ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಶಿಖರ್ ಧವನ್ 29 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 40 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಕೊನೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್‌ ಜಿತೇಶ್ ಶರ್ಮಾ(21), ಸಿಕಂದರ್ ರಾಜಾ(16) ಹಾಗೂ ಸ್ಯಾಮ್ ಕರ್ರನ್‌(26*) ಹಾಗೂ ಶಾರುಕ್‌ ಖಾನ್(11*) ಉಪಯುಕ್ತ ರನ್‌ ಕಾಣಿಕೆ ನೀಡಿದರು. ಪರಿಣಾಮ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!