ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಗ್ಲೋಬಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆ 2023ರ ಮೂರನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ.
ಮುಂಬೈನ ಎಂಎಂಆರ್‌ಡಿಎ ಮೈದಾನದಲ್ಲಿ ಅಕ್ಟೋಬರ್ 17 ರಿಂದ 19 ರವರೆಗೆ ನಡೆಯಲಿರುವ ಶೃಂಗ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ ಅವರು ಭಾರತೀಯ ಕಡಲ ಆರ್ಥಿಕತೆಯ ದೀರ್ಘಾವಧಿಯ ನೀಲನಕ್ಷೆ ‘ಅಮೃತ್ ಕಾಲ್ ವಿಷನ್ 2047’ ಅನ್ನು ಅನಾವರಣಗೊಳಿಸಲಿದ್ದಾರೆ.
ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯವು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಉದ್ಘಾಟನಾ ಅಧಿವೇಶನದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವನ್ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಅರ್ಮೇನಿಯಾ, ಬಾಂಗ್ಲಾದೇಶ, ಬೆಲಾರಸ್, ಕೊಮೊರೊಸ್, ಇರಾನ್, ಇಟಲಿ, ಶ್ರೀಲಂಕಾ, ತಾಂಜಾನಿಯಾ, ತುರ್ಕಮೆನಿಸ್ತಾನ್, ಉಜ್ಬೇಕಿಸ್ತಾನ್, ಸ್ಪೇನ್ ಮತ್ತು ನೇಪಾಳ ಸೇರಿದಂತೆ 12 ದೇಶಗಳ ಮಂತ್ರಿಗಳು ಈ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.
ಶೃಂಗಸಭೆಯಲ್ಲಿ ಕಡಲ ವಲಯದ ಪ್ರಮುಖ ಕ್ಷೇತ್ರಗಳ ಕುರಿತು ಅಧಿವೇಶನ ಮತ್ತು ಚರ್ಚೆಗಳು ನಡೆಯಲಿವೆ.