ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಕೇರಳ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ತಿರುವನಂತಪುರದಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಬಳಿಕ ಮೋದಿಯವರು ದೇಶದಲ್ಲೇ ಪ್ರಥಮ ಬಾರಿಗೆ ಕೇರಳದ ಕೊಚ್ಚಿಯಲ್ಲಿ ವಾಟರ್ ಮೆಟ್ರೋ ಸೇವೆಯನ್ನು ಉದ್ಘಾಟಿಸಿದರು. ಕೇರಳದ ಪಿಣರಾಯಿ ವಿಜಯನ್ ಸರ್ಕಾರವು ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸಲು ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಕೇರಳ ಸರ್ಕಾರ ಜರ್ಮನಿಯೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ವಾಟರ್ ಮೆಟ್ರೋ ಈಗಾ ಸೇವೆಗೆ ಸಿದ್ಧವಾಗಿದೆ. ಈ ಮೆಟ್ರೋ ಸೇವೆಗಳು ಕೊಚ್ಚಿಯ ಸುತ್ತಲಿನ 10 ದ್ವೀಪಗಳನ್ನು ಒಳಗೊಂಡಿರುತ್ತವೆ. 10 ದ್ವೀಪಗಳನ್ನು ಸಂಪರ್ಕಿಸುವ 78 ಎಲೆಕ್ಟ್ರಿಕ್ ಬೋಟ್‌ಗಳ ಸೇವೆಗಳನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈ ನೀರಿನ ಮೆಟ್ರೋ ಕೇರಳದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಸರ್ಕಾರ ಭಾವಿಸಿದೆ. ಈ ವಾಟರ್ ಮೆಟ್ರೋ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಉಂಟು ಮಾಡಲಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ವಾಟರ್ ಮೆಟ್ರೋದ ವೈಶಿಷ್ಟ್ಯಗಳು ಹೀಗಿವೆ
- ವಾಟರ್ ಮೆಟ್ರೋ ಕೊಚ್ಚಿಯ ಸುತ್ತಲಿನ 10 ದ್ವೀಪಗಳಿಗೆ ಸೇವೆ ಸಲ್ಲಿಸುತ್ತವೆ.
- ಯೋಜನೆಯ ಮೊದಲ ಹಂತದಲ್ಲಿ, ಹೈಕೋರ್ಟ್ ವಿಪಿನ್ ಟರ್ಮಿನಲ್‌ಗಳಿಂದ ವೈತ್ತಿಲ ಕಾಕ್ಕನಾಡು ಟರ್ಮಿನಲ್‌ಗಳಿಗೆ ಸೇವೆಗಳನ್ನು ಒದಗಿಸಲಾಗುತ್ತದೆ.
- ಕೊಚ್ಚಿ 1 ಐಡಿ ಕಾರ್ಡ್ ನಿಮಗೆ ಈ ನೀರಿನ ಮೆಟ್ರೋದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.
- ಕೊಚ್ಚಿ ವಾಟರ್ ಮೆಟ್ರೋ ಡಿಜಿಟಲ್ ಮೂಲಕ ಟಿಕೆಟ್ ಬುಕ್ ಮಾಡುವ ಅವಕಾಶ ಕಲ್ಪಿಸಿದೆ. ಟಿಕೆಟ್ ದರವನ್ನು ಕನಿಷ್ಠ ರೂ.20 ಮತ್ತು ಗರಿಷ್ಠ ರೂ.40 ಎಂದು ನಿಗದಿಪಡಿಸಲಾಗಿದೆ. ಸಾಪ್ತಾಹಿಕ ಮತ್ತು ಮಾಸಿಕ ಪಾಸ್ ಗಳನ್ನು ತೆಗೆದುಕೊಳ್ಳುವ ಅವಕಾಶವನ್ನೂ ಮಾಡಿದೆ. ಇವುಗಳ ಬೆಲೆ ರೂ.180,600,1500.
- ಟ್ರಾಫಿಕ್ ಜಾಮ್‌ಗಳಿಲ್ಲದ ವೇಗದ ಪ್ರಯಾಣಕ್ಕೆ ವಾಟರ್ ಮೆಟ್ರೋ ಉತ್ತಮ ಪ್ರಯಾಣವಾಗಲಿದೆ.
- 10 ದ್ವೀಪಗಳು, 15 ಮಾರ್ಗಗಳು, 38 ಟರ್ಮಿನಲ್‌ಗಳು, 78 ಎಲೆಕ್ಟ್ರಿಕ್ ದೋಣಿಗಳು 78 ಕಿ.ಮೀ.ಕ್ರಮಿಸಲಿದೆ.