ನಾಳೆ ಯುಪಿಗೆ ಪ್ರಧಾನಿ ಮೋದಿ: 19,100 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಸಿಗಲಿದೆ ಚಾಲನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಾಳೆ (ಗುರುವಾರ) ₹19,100 ಕೋಟಿಗೂ ಹೆಚ್ಚು ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ .

ರೈಲು, ರಸ್ತೆ, ತೈಲ, ನಗರಾಭಿವೃದ್ಧಿ ಮತ್ತು ವಸತಿ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಮೋದಿ ಅವರು ಚಾಲನೆ ನೀಡಲಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.

ಸರಕು ಸಾಗಣೆ ಕಾರಿಡಾರ್‌ನ (ಡಿಎಫ್‌ಸಿ) ನ್ಯೂ ಖುರ್ಜಾ ಹಾಗೂ ನ್ಯೂ ರೇವಾರಿ ನಡುವೆ 173 ಕಿ.ಮೀ ಉದ್ದದ ದ್ವಿಪಥ ಮಾರ್ಗದ ಹೊಸ ವಿಭಾಗವನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಲಿದ್ದಾರೆ.ಈ ಹೊಸ ಡಿಎಫ್‌ಸಿ ವಿಭಾಗವು ಪಶ್ಚಿಮ ಮತ್ತು ಪೂರ್ವ ಸರಕು ಸಾಗಣೆ ಕಾರಿಡಾರ್‌ಗಳ ನಡುವೆ ನಿರ್ಣಾಯಕ ಪಾತ್ರವಹಿಸಲಿದೆ.

ಮಥುರಾ-ಪಲ್ವಾಲ್ ಮತ್ತು ಚಿಪಿಯಾನಾ ಬುಜುರ್ಗ್ – ದಾದ್ರಿ ವಿಭಾಗಗಳನ್ನು ಸಂಪರ್ಕಿಸುವ ನಾಲ್ಕನೇ ರೈಲು ಮಾರ್ಗ ಮತ್ತು ₹5,000 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ರಸ್ತೆ ಯೋಜನೆಗಳನ್ನು ಮೋದಿ ಉದ್ಘಾಟಿಸಲಿದ್ದಾರೆ.

ಕೇಂದ್ರ ಸರ್ಕಾರದ ಗತಿಶಕ್ತಿ ಯೋಜನೆಯಡಿಯಲ್ಲಿ ₹1,714 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಇಂಡಿಯನ್ ಆಯಿಲ್‌ನ ತುಂಡ್ಲಾ-ಗವಾರಿಯಾ ಪೈಪ್‌ಲೈನ್ ಮತ್ತು ಗ್ರೇಟರ್ ನೋಯ್ಡಾದಲ್ಲಿ ಸಮಗ್ರ ಕೈಗಾರಿಕಾ ಟೌನ್‌ಶಿಪ್ (ಐಐಟಿಜಿಎನ್) ಅನ್ನು ಮೋದಿ ಉದ್ಘಾಟಿಸಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!