ಪ್ರಧಾನಿ ಮೋದಿ ಸಾಹಿತ್ಯದಲ್ಲಿ ಮೂಡಿ ಬಂತು ನವರಾತ್ರಿಯ ವಿಶೇಷ ಹಾಡು ‘ಗಾರ್ಬೋ’

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನವರಾತ್ರಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಸಾಹಿತ್ಯ ಬರೆದಿರುವ ಹೊಸ ಹಬ್ಬದ ಹಾಡು ‘ಗಾರ್ಬೋ’ ಬಿಡುಗಡೆಯಾಗಿದೆ. ಈ ಹಾಡಿಗೆ ಗಾಯಕಿ ಧ್ವನಿ ಭಾನುಶಾಲಿ ಧ್ವನಿಯಾಗಿದ್ದು, ತನಿಷ್ಕ್ ಬಾಗ್ಚಿ ಸಂಗೀತ ಸಂಯೋಜಿಸಿದ್ದಾರೆ. ಜಾಕಿ ಭಗ್ನಾನಿ ಹಾಡನ್ನು ನಿರ್ಮಿಸಿದ್ದಾರೆ.

‘ಗಾರ್ಬೋ’ಗೆ ಸಾಹಿತ್ಯ ನೀಡಿದ ಪ್ರಧಾನಿ

ಪ್ರಧಾನಿ ಮೋದಿ ನವರಾತ್ರಿಯ ಹೊಸ ಹಾಡು ‘ಗಾರ್ಬೋ’ಗೆ ಸಾಹಿತ್ಯ ಬರೆದಿದ್ದಾರೆ. ಈ ಹಾಡಿನ ಮೂಲಕ ಏಕತೆಯ ಸಂದೇಶ ಸಾರಿದ್ದಲ್ಲದೆ, ಸಾಂಸ್ಕೃತಿಕ ವೈವಿಧ್ಯತೆಯನ್ನು ಎತ್ತಿ ತೋರಿಸಲಾಗಿದೆ. ವಿಶೇಷವಾಗಿ ಗುಜರಾತ್ ರಾಜ್ಯದ ಸಾಂಸ್ಕೃತಿಕ ವೈಭವವನ್ನು ಬಿಂಬಿಸಲಾಗಿದೆ. ಭಾನುಶಾಲಿ ಹಾಡಿಗೆ ಧ್ವನಿಯಾಗುವುದರ ಜತೆಗೆ ವಿಡಿಯೊದಲ್ಲಿ ನಟಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಹಲವು ವರ್ಷಗಳ ಹಿಂದೆ ನಾನು ಬರೆದ ‘ಗಾರ್ಬಾ’ದ ಸಾಹಿತ್ಯವನ್ನು ಸುಂದರವಾಗಿ ಕಟ್ಟಿಕೊಟ್ಟಿರುವುದಕ್ಕೆ ಧ್ವನಿ ಭಾನುಶಾಲಿ, ತನಿಷ್ಕ್ ಬಾಗ್ಚಿ, ಜಸ್ಟ್ ಮ್ಯೂಸಿಕ್ ಮತ್ತು ತಂಡಕ್ಕೆ ಧನ್ಯವಾದಗಳು. ಈ ಮೂಲಕ ನನ್ನ ಹಳೆಯ ನೆನಪುಗಳನ್ನು ಮತ್ತೆ ಮುನ್ನೆಲೆಗೆ ತಂದಿದ್ದೀರಿ. ನವರಾತ್ರಿಯ ಸಂದರ್ಭದಲ್ಲಿ ನಾನು ಇದನ್ನು ಹಂಚಿಕೊಳ್ಳುತ್ತಿದ್ದೇನೆ” ಎಂದು ಹೇಳಿದ್ದಾರೆ.

ಮ್ಯೂಸಿಕ್ ಲೇಬಲ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ಗಾರ್ಬೋ ಹಾಡು ಕೇವಲ 3 ಗಂಟೆಗಳಲ್ಲಿ 2.4 ಲಕ್ಷ ವೀಕ್ಷಣೆ ಕಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!