Wednesday, February 8, 2023

Latest Posts

ತಾಯಿ ಹೀರಾಬೆನ್‌ ನಿಧನ: ಭಾವುಕ ಟ್ವೀಟ್‌ ಮಾಡಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮ್ಮ ತಾಯಿ ಹೀರಾಬೆನ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅಗಲಿದ ತಾಯಿಯ ಕುರಿತು ಭಾವನಾತ್ಮಕ ಪೋಸ್ಟ್‌ ಮಾಡಿರುವ ಪ್ರಧಾನಿ ʻತನ್ನ ತಾಯಿ ಶತಾಯುಷಿಯಾಗಿ ಬದುಕಿ ಕೊನೆಗೆ ಈಶ್ವರನ ಪಾದಗಳಲ್ಲಿ ಲೀನರಾಗಿದ್ದಾರೆ. ಅವರಲ್ಲಿ ನಾನು ತ್ರಿಮೂರ್ತಿಗಳ ಕಂಡ ಅನುಭವವಾಗಿದೆ. ತಪಸ್ವೀ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆʼ. ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ಅವರ 100 ನೇ ಹುಟ್ಟುಹಬ್ಬದ ದಿನದಂದು ಭೇಟಿಯಾಗಿ ಆಶೀರ್ವಾದ ಪಡೆದಾಗ ಅವರು ಹೇಳಿದ ಮಾತು ಸದಾ ನನ್ನ ನೆನಪಿನಂಗಳದಲ್ಲಿರುತ್ತದೆ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಶುದ್ಧ ಜೀವನ ನಡೆಸಿ ಎಂದು ಆಶೀರ್ವದಿಸಿದರು.

ಹೀರಾಬೆನ್‌ ಮೋದಿ ಅವರ ಆರೋಗ್ಯ ಮೂರ್ನಾಲ್ಕು ದಿನಗಳಿಂದ ಹದಗೆಟ್ಟಿತ್ತು. ಮಂಗಳವಾರ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದಕ್ಕೆ ಅಹಮಾದಾಬಾದ್‌ನ ಯುಎನ್ ಮೆಹ್ತಾ ಆಸ್ಪತ್ರೆಯ ಹೃದ್ರೋಗ ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ನಿನ್ನೆವರೆಗೂ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮಂಡಳಿ ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿತ್ತು. ಆದರೆ, ಇಂದು ಬೆಳ್ಳಂಬೆಳಗ್ಗೆ ಬಾರದ ಲೋಕಕ್ಕೆ ತೆರಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!