ಪ್ರಧಾನಿ ಮೋದಿಗೆ ಹೂವಿನ ಹಾರ ಕೊಡುವಾಗ ಅವರ ಕೈ ಟಚ್ ಆಯ್ತು, ಅಷ್ಟು ಸಾಕು: ಹುಬ್ಬಳ್ಳಿ ಬಾಲಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹುಬ್ಬಳ್ಳಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಈ ವೇಳೆ ಭದ್ರತೆ ಬೇಧಿಸಿ ಪ್ರಧಾನಿಗೆ ಹೂವಿನ ಹಾರ ನೀಡಿದ ಬಾಲಕ, ಇದೀಗ ಪ್ರಧಾನಿ ಮೋದಿ ಕಂಡ್ರೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾನೆ.

ಆರನೇ ತರಗತಿ ವಿದ್ಯಾರ್ಥಿ ಕುನಾಲ್, ನಾನು ಮೋದಿ ಅವರ ಅಭಿಮಾನಿ, ಅವರನ್ನು ಹತ್ತಿರದಿಂದ ನೋಡಿ ಕೈಕುಲುಕಬೇಕು ಅನ್ನೋ ಆಸೆಯಾಗಿತ್ತು. ಹಾಗಾಗಿ ಬ್ಯಾರಿಕೇಡ್ ಹಾರಿದೆ. ಪ್ರಧಾನಿ ಮೋದಿ ಅವರಿಗೆ ಹಾರ ಕೊಡುವಾಗ ಅವರ ಎಡಗೈ ನನಗೆ ಟಚ್ ಆಯ್ತು. ನನಗೆ ಇಷ್ಟೇ ಸಾಕು, ಅವರ ಕೈಕುಲುಕಿ ನಮಸ್ತೆ ಹೇಳುತ್ತಿದ್ದೆ ಅಷ್ಟರೊಳಗೆ ಪೊಲೀಸರು ನನ್ನನ್ನು ತಡೆದು ಬ್ಯಾರಿಕೇಡ್‌ನಿಂದ ಹೊರಬಿಟ್ಟರು ಎಂದು ಬಾಲಕ ಹೇಳಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!