ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಕಳೆದ ೯ ವರ್ಷಗಳಿಂದ ಪ್ರತಿ ತಿಂಗಳ ಕೊನೆಯ ವಾರ ಪ್ರತಿಯೊಬ್ಬರ ಮನೆಗೆ ಬರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ ಈ ಬಾರಿ ತಿಂಗಳ ಮಧ್ಯದಲ್ಲಿ ನಡೆಯಲಿದೆ.
ಹೌದು, ಪ್ರತಿ ಬಾರಿ ಅದು ತಿಂಗಳ ಕೊನೇ ಭಾನುವಾರ ನಡೆಯುವ ಈ ಕಾರ್ಯಕ್ರಮ ಪ್ರಸಾರ , ಈ ತಿಂಗಳು ಜೂನ್ 18ರಂದು ನಿಗದಿ ಮಾಡಲಾಗಿದೆ.
ಈ ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಮಾಹಿತಿ ನೀಡಿದ್ದು,ಈ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮ ಜೂನ್ 18ರ ಭಾನುವಾರ ನಡೆಯಲಿದೆ. ನಿಮ್ಮ ಸಲಹೆಗಳು ಹಾಗೂ ಅಭಿಪ್ರಾಯಗಳನ್ನು ಸ್ವೀಕರಿಸುವುದು ಯಾವಾಗಲೂ ವಿಶೇಷ ಅನುಭವವಾಗಿರುತ್ತದೆ. ನೀವು ಕೊಡಬೇಕಾಗಿರುವ ಮಾಹಿತಿಗಳನ್ನು ನಮೋ ಆಪ್, ಮೈಗವ್ ಮೂಲಕ ಹಂಚಿಕೊಳ್ಳಿ ಅಥವಾ 1800-11-7800 ಗೆ ಡಯಲ್ ಮಾಡುವ ಮೂಲಕ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಿ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರತಿ ತಿಂಗಳ ಕೊನೆಯ ಭಾನುವಾರದಂದು ಮನ್ ಕಿ ಬಾತ್’ ಕಾರ್ಯಕ್ರಮ ನಡೆಯುತ್ತದೆ. ಆದ್ರೆ ಈ ಬಾರಿ ಜೂನ್ 21 ರಿಂದ 24 ರವರೆಗೆ ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಮೊದಲೇ ನಿಗದಿ ಮಾಡಿರುವ ಕಾರ್ಯಕ್ರಮವಾಗಿರುವ ಕಾರಣ ಅವರು ಮನ್ ಕಿ ಬಾತ್ ಅನ್ನು ಮೊದಲೇ ಪೂರ್ಣಗೊಳಿಸಲಿದ್ದಾರೆ.