Wednesday, June 7, 2023

Latest Posts

ಪ್ರಧಾನಿ ಮೋದಿಯೇ ದೊಡ್ಡ ಹುಲಿ: ಕೆ.ಎಸ್.‌ ಈಶ್ವರಪ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಬಂಡೀಪುರ ಸಫಾರಿ ವೇಳೆ ಪ್ರಧಾನಿ ಮೋದಿಯವರಿಗೆ ಹುಲಿ ಕಾಣಲಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮೋದಿಯೇ ದೊಡ್ಡ ಹುಲಿ. ಅವರ ನೇತೃತ್ವ ನಮಗೆ ಸಿಕ್ಕಿರುವುದು ಪುಣ್ಯ
ಎಂದಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಟೀಕಿಸುವುದು ಬಿಟ್ಟರೆ ಬೇರೇನು ಗೊತ್ತಿದೆ. ಅಕಸ್ಮಾತ್ ಒಂದು ಹುಲಿ ಕಂಡಿದ್ದರೆ, ಒಂದೇ ಹುಲಿ ಎಂದು ಟೀಕಿಸುತ್ತಿದ್ದರು. ಕಾಂಗ್ರೆಸ್‌ನವರು ಟೀಕಿಸುವುದರಲ್ಲೇ ತಮ್ಮ ಜೀವನ ಕಳೆದಿದ್ದಾರೆ ಎಂದು ವ್ಯಂಗ್ಯವಾಡಿದರು.

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಪ್ರಶ್ನೆ ಉದ್ಘವವಾಗದು, ಹಾಗಾಗಿಯೇ ಅವರು ಎಲ್ಲರನ್ನು ಟೀಕೆ ಮಾಡುತ್ತಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!