Tuesday, October 3, 2023

Latest Posts

ನಾಳೆ ‘ಯಶೋಭೂಮಿ’ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯ ದ್ವಾರಕಾದಲ್ಲಿರುವ ಯಶೋಭೂಮಿ ಹೆಸರಿನ ಇಂಡಿಯಾ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಅಂಡ್ ಎಕ್ಸ್‌ಪೊ ಸೆಂಟರ್‌ (ಐಐಸಿಸಿ) ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಉದ್ಘಾಟಿಸಲಿದ್ದಾರೆ. ಇದರ ಜೊತೆಗೆ ದ್ವಾರಕ ಸೆಕ್ಟರ್‌ 21ರಿಂದ ದ್ವಾರಕಾ ಸೆಕ್ಟರ್‌ 25ರವರೆಗೆ ವಿಸ್ತರಿಸಿರುವ ದೆಹಲಿ ಏರ್‌ಪೋರ್ಟ್‌ ಮೆಟ್ರೊ ಎಕ್ಸ್‌ಪ್ರೆಸ್‌ ಮಾರ್ಗವನ್ನೂ ಅವರು ಉದ್ಘಾಟಿಸಲಿದ್ದಾರೆ.

ಯಶೋಭೂಮಿಯು ಒಟ್ಟು 8.9 ಲಕ್ಷ ಚದರ ಮೀಟರ್‌ಗಿಂತ ಹೆಚ್ಚಿನ ಯೋಜನಾ ಪ್ರದೇಶ ಮತ್ತು 1.8 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚಿನ ಒಟ್ಟು ನಿರ್ಮಿತ ಪ್ರದೇಶದಲ್ಲಿ ಇದೆ.

ಈ ಸಮಾವೇಶ ಭವನವು 73 ಸಾವಿರ ಚದರ ಮೀಟರ್‌ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದು , 15 ಕೋಣೆಗಳಿವೆ. ಒಟ್ಟು 11 ಸಾವಿರ ಪ್ರತಿನಿಧಿಗಳು ಸೇರುವ ಸಾಮರ್ಥ್ಯವಿರುವ 13 ಸಭೆ ಕೊಠಡಿಗಳಿವೆ. ಈ IICC ಯಲ್ಲಿ ದೇಶದ ಬೃಹತ್ ಸಭೆಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳು ನಡೆಯಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!