ಮೈಸೂರಲ್ಲಿ ಮೋದಿ ಹವಾ: ದಸರಾ ಜಂಬೂ ಸವಾರಿ ಸಾಗುವ ರಾಜಪಥದಲ್ಲಿ ನಾಳೆ ಭರ್ಜರಿ ರೋಡ್‌ ಶೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ರಾಷ್ಟ್ರ ನಾಯಕರು ಬಿಡುವಿಲ್ಲದೆ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಇಂದು ಮತ್ತು ನಾಳೆ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಕೈಗೊಂಡಿದ್ದು, ನಾಳೆ ಮೈಸೂರಿಗೆ ಆಗಮಿಸಲಿದ್ದಾರೆ.

ನಾಲೆ ಮೈಸೂರಿನ ಸುಪ್ರಸಿದ್ಧ ಜಂಬೂ ಸವಾರಿ ಮಾರ್ಗದಲ್ಲಿ ಪ್ರಧಾನಿ ಮೋದಿಯವರ ರೋಡ್ ಶೋ ನಡೆಯಲಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮತ್ತೊಮ್ಮೆ ಜಗಮಗಿಸಲು ಸಜ್ಜಾಗಿದೆ.

ಮೈಸೂರಿನಲ್ಲಿ ನರೇಂದ್ರ ಮೋದಿಯವರ ರೋಡ್ ಶೋ ಭಾನುವಾರ ಸಂಜೆ 5:45 ಕ್ಕೆ ಪ್ರಾರಂಭವಾಗಿ 6:30 ಕ್ಕೆ ಮುಕ್ತಾಯಗೊಳ್ಳಲಿದೆ. ನಗರದ ಗನ್ ಹೌಸ್‌ ವಿದ್ಯಾಪೀಠದಿಂದ ರೋಡ್‌ಶೋ ಆರಂಭಗೊಂಡು ಎಲ್‌ಐಸಿ ವೃತ್ತದಲ್ಲಿ ಕೊನೆಗೊಳ್ಳಲಿದೆ. 5.3 ಕಿಲೋಮೀಟರ್ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಜನರು ರೋಡ್‌ಶೋನಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಭಾನುವಾರದಂದು ಹಳೇ ಮೈಸೂರು ಪ್ರದೇಶದ ರಾಮನಗರದ ಶೆಟ್ಟಿಹಳ್ಳಿಯಲ್ಲಿ ನರೇಂದ್ರ ಮೋದಿ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಅಲ್ಲಿ ಸುತ್ತಮುತ್ತಲಿನ 10 ಕ್ಷೇತ್ರಗಳಿಂದ ಸುಮಾರು 50,000 ಜನರು ಸೇರುವ ನಿರೀಕ್ಷೆಯಿದೆ. ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ರಾಮನಗರದಲ್ಲಿ ನಡೆದ ಕಾರ್ಯಕ್ರಮದ ನಂತರ ಪ್ರಧಾನಿಯವರು ರೋಡ್ ಶೋಗಾಗಿ ಮೈಸೂರಿಗೆ ತೆರಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!