ಸಕ್ಕರೆ ನಾಡಿನಲ್ಲಿ ಮೋದಿ ಮೇನಿಯಾ: ರೋಡ್‌ ಶೋ ವೇಳೆ ʻಮೋದಿ ಮೋದಿʼ ಎಂದು ಹರ್ಷೋದ್ಘಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೈಸೂರಿನಿಂದ ಹೆಲಿಕಾಪ್ಟರ್​​ನಲ್ಲಿ ಮಂಡ್ಯದ ಪಿಇಎಸ್ ಕಾಲೇಜು ಹೆಲಿಪ್ಯಾಡ್‌ಗೆ ಮೋದಿ ಬಂದಿಳಿದಿದ್ದಾರೆ. ಪ್ರವಾಸಿಮಂದಿರ ವೃತ್ತದಿಂದ ಮೋದಿ ರೋಡ್‌ಶೋ ಶುರುವಾಗಿದ್ದು, ರಸ್ತೆ ಇಕ್ಕೆಲಗಳಲ್ಲಿ ಜನರಿಂದ ಮೋದಿ ಮೋದಿ ಹರ್ಷೋದ್ಘಾರ ಮೊಳಗುತ್ತಿದೆ. ಪ್ರಧಾನಿ, ಅವರ ಕಾರಿನ ಮೇಲೆ ಜನರಿಂದ ಪುಷ್ಟಪವೃಷ್ಟಿ ಹರಿಯುತ್ತಿದೆ.

ರಸ್ತೆ ಬದಿ ನೆರೆದಿರುವ ಜನರತ್ತ ಪ್ರಧಾನಿ ಕೈಬೀಸುತ್ತಿದ್ದಾರೆ. ಬಿಗಿ ಭದ್ರತೆಯಲ್ಲಿ ರೋಡ್‌ ಶೋ ನಡೆಯುತ್ತಿದ್ದು, ಮೋದಿ ನೋಡಲು ಲಕ್ಷಾಂತರ ಜನ ರಸ್ತೆ ಬದಿಯಲ್ಲಿ ನಿಂತಿದ್ದಾರೆ. ಜನರಿಂದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಶಿಳ್ಳೆ, ಚಪ್ಪಾಳೆ, ಹೂಮಳೆ ಸುರಿಸುತ್ತಿದ್ದಾರೆ.

ಪ್ರವಾಸಿಮಂದಿರ ವೃತ್ತದಿಂದ ನಂದಾ ಸರ್ಕಲ್‌ವರೆಗೆ ರೋಡ್‌ಶೋ ನಡೆಯುತ್ತಿದ್ದು, ಪ್ರಧಾನಿ ಜನರಿಗೆ ನಮಸ್ಕರಿಸುತ್ತಿದ್ದಾರೆ. ರಸ್ತೆಯಲ್ಲಿ ನಿರೀಕ್ಷೆಗೂ ಮೀರಿದ ಜನ ಹೂಮಳೆ ಸುರಿಸುತ್ತಿದ್ದಾರೆ. 1.8 ಕಿ.ಮೀ. ದೂರ ಮೋದಿ ರೋಡ್​ಶೋ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!