ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣದ ಭಾಗವಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿದ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ಬೆಳಕಿಗೆ ಬಂದಿದೆ.
ಸಿಎಂ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿದ ನಂತರ ಸರ್ಕಾರವು ಬಿಎಸ್‌ವೈ ವಿರುದ್ಧ ಕಾನೂನು ಪ್ರಕ್ರಿಯೆಗಳನ್ನು ತೀವ್ರಗೊಳಿಸಿದೆ.
ಬಿಎಸ್‌ವೈ ವಿರುದ್ಧದ ತಡೆಯಾಜ್ಞೆ ಹಿಂಪಡೆಯಲು ಕೋರ್ಟ್ ಮೊರೆ ಹೋಗಿದೆ. ಮಧ್ಯಂತರ ಆದೇಶ ಹಿಂಪಡೆಯುವ ಮೂಲಕ ಯಡಿಯೂರಪ್ಪ ಅವರನ್ನು ಸಂಕಷ್ಟಕ್ಕೆ ಸಿಲುಕಿಸಲು ಸರ್ಕಾರ ಪ್ಲಾನ್ ಮಾಡಲಾಗಿದೆ.