ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶಕ್ಕೆ ಏನಾದರೂ ಮಾಡಬೇಕು ಧ್ಯೇಯೋದ್ದೇಶದೊಂದಿಗೆ ಯವಕರು ರಾಜಕೀಯಕ್ಕೆ ಬರಬೇಕೆ ವಿನಃ ಯಾವುದೊ ಮಹತ್ವಾಕಾಂಕ್ಷೆಯೊಂದಿಗೆ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಝೆರೋದಾ ಸಹ ಸಂಸ್ಥಾಪಕ (Co-founder of Zeroda) ನಿಖಿಲ್ ಕಾಮತ್ (Nikhil Kamath) ಅವರೊಂದಿಗೆ ಪೀಪಲ್ ವಿಥ್ ದಿ ಪ್ರೈಮ್ ಮಿನಿಸ್ಟರ್ (People with the Prime Minister) ಎಂಬ ಪಾಡ್‌ಕಾಸ್ಟ್ (Podcast) ಮಾತನಾಡಿದ ಅವರು, ರಾಜಕೀಯಕ್ಕೆ ಬರುವುದೇ ಬೇರೆ ರಾಜಕೀಯದಲ್ಲಿ ಯಶಸ್ವಿಯಾಗುವುದೇ ಬೇರೆ. ನೀವು ತಂಡದ ಆಟಗಾರರಾಗಿದ್ದರೆ ಅದು ರಾಜಕೀಯಕ್ಕೆ ಬಂದಂತೆಯೇ, ಆದರೆ ನೀವು ಯಶಸ್ವಿಯಾಗಬೇಕಾದರೆ ಒಳ್ಳೆಯ ಉದ್ದೇಶದೊಂದಿಗೆ ಇರಬೇಕು ಎಂದರು.
ಉದ್ಯಮಿಯಾಗಬೇಕೆನ್ನುವವರು ತಮ್ಮ ಕಂಪನಿಯ ಬೆಳವಣಿಗೆಯನ್ನು ನೋಡುತ್ತಾರೆ. ಆದರೆ ರಾಜಕಾರಣಿಯಾಗ ಬೇಕೆನ್ನುವವರು ರಾಷ್ಟ್ರ ಮೊದಲು ಎನ್ನುತ್ತಾ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ದರಾಗಿರಬೇಕು. ಆಗ ಅವರನ್ನು ಸಮಾಜ ಒಪ್ಪಿಕೊಳ್ಳುತ್ತದೆ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ, ಸಮಾಜದ ಎಲ್ಲಾ ವರ್ಗಗಳ ಹಲವಾರು ನಾಯಕರು ಭಾಗವಹಿಸಿದ್ದರು. ಆದರೆ ಎಲ್ಲ ನಾಯಕರು ರಾಜಕೀಯ ಬರಲಿಲ್ಲ. ಕೆಲವರು ಶಿಕ್ಷಣದ ಮೇಲೆ ಕೇಂದ್ರೀಕರಿಸಿದರೆ, ಇನ್ನು ಕೆಲವರು ಖಾದಿಯ ಮೇಲೆ ಹೋರಾಟ ಮಾಡಿದರು. ಆದರೆ ಅವರೆಲ್ಲರ ಚಳುವಳಿಯು ದೇಶಭಕ್ತಿಯ ಉತ್ಸಾಹದಿಂದ ಪ್ರೇರಿತವಾಗಿತ್ತು. ಇದರಲ್ಲಿ ಒಂದು ಗುಂಪು ಮಾತ್ರ ರಾಜಕೀಯದತ್ತ ಮುಖ ಮಾಡಿತ್ತು. ಯಾಕೆಂದರೆ ಈ ನಾಯಕರು ವಿಭಿನ್ನ ಆಲೋಚನೆಗಳು ಮತ್ತು ಪ್ರಬುದ್ಧತೆಯನ್ನು ಹೊಂದಿದ್ದರು. ಈ ಹೋರಾಟಗಾರರೂ ದೇಶಕ್ಕಾಗಿ ತ್ಯಾಗ ಮಾಡಲು ಬಯಸಿದ್ದರು. ಎಂದರು.
ಇಂದಿನ ದಿನಮಾನಗಳಲ್ಲಿ ನಾಯಕರ ಕುರಿತ ವ್ಯಾಖ್ಯಾನವೇ ಬದಲಾಗಿದೆ. ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಮಹಾತ್ಮ ಗಾಂಧಿಯವರು ನಾಯಕರ ಕುರಿತ ಇವತ್ತಿನ ವ್ಯಾಖಾನಕ್ಕೆ ತದ್ವಿರುದ್ದವಾಗಿದ್ದರು. ಅವರು ಮೃದು ಸ್ವಭಾವಿಯಾಗಿದ್ದರು. ಹೆಚ್ಚು ಮಾತನಾಡುತ್ತಿರಲ್ಲಿಲ. ಆದರೆ ಅವರ ಮಾತನಾಡದೇ ಇದ್ದರು ಸಹ ಅವರನ್ನು ಇಡೀ ದೇಶವೇ ಇಂಬಾಲಿಸುತಿತ್ತು ಎಂದರು.
ಅಹಿಂಸೆಯ ಬಗ್ಗೆ ಮಾತನಾಡುತ್ತಿದ್ದ ಮಹಾತ್ಮ ಗಾಂಧಿಯವರು ತಮ್ಮಗಿಂತ ಎತ್ತರದ ಕೋಲನ್ನು ಒಯ್ಯುತ್ತಿದ್ದರು, ಅದು ಅವರ ಸಂವಹನ ಶಕ್ತಿಯಾಗಿತ್ತು. ಆದರೆ ಅವರು ಎಂದಿಗೂ ಟೋಪಿ ಧರಿಸಿರಲಿಲ್ಲ, ಆದರೆ ಜಗತ್ತು ಗಾಂಧಿ ಟೋಪಿಯನ್ನು ಧರಿಸುತ್ತದೆ. ಇನ್ನು ಗಾಂಧಿಯವರು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು, ಆದರೆ ಅವರು ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ ಎಂದರು.