August 29, 2026
Saturday, August 29, 2026
spot_img

ಟಿಬೇಟಿಯನ್ ಕಾಲೋನಿಯ ಲಾಮಾನ ಹ*ತ್ಯೆ ಹಂತಕರನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಹೊಸದಿಗಂತ ವರದಿ ಉತ್ತರ ಕನ್ನಡ:

ಎಪ್ರೀಲ್ 29 ರಂದು ಟಿಬೇಟಿಯನ್ ಕ್ಯಾಂಪ್ ನಂಬರ್ ಒಂದರ ತಾಶಿ ದೊಂಡುಪ ಎಂಬಾತನನ್ನು ಹತ್ಯೆ ಮಾಡಿ, ಕೈಕಾಲು ಕಟ್ಟಿ ಧಾರವಾಡ ಹೊರವಲಯದಲ್ಲಿ ಶವ ಎಸೆದು ಹೋಗಿದ್ದ ಹಂತಕರನ್ನು ಧಾರವಾಡ ಪೋಲೀಸರು ಕೊನೆಗೂ ಬಂಧಿಸಿದ್ದಾರೆ.

ಬಂಧಿತರನ್ನು ಮಹಾರಾಷ್ಟ್ರದ ಸಂಕೇತ ಯಾದವ್, ವೈಭವ್ ಚವ್ಹಾಣ, ಸಿದ್ದೇಶ ಭೋಸ್ಲೆ ಎಂದು ಗುರುತಿಸಲಾಗಿದೆ.

ಹಣಕ್ಕಾಗಿ ನಡೀತು ಕೊಲೆ..!
ಸಂಪನ್ನನಾಗಿದ್ದ ತಾಸಿ ದೊಂಡುಪ್ ಸದ್ಯ ಹೆಣವಾಗಿರೋದರ ಹಿಂದೆ ದುಡ್ಡಿನ ಕಾರಣವಿದೆ. ಲಾಮಾನ ಬಳಿ ಹಣ ಇದೆ ಎಂದು ಆತನನ್ನ ಕಿಡ್ನ್ಯಾಪ್ ಮಾಡಿ, ಆತನ ಬಳಿ ನಯಾಪೈಸೆಯೂ ಸಿಗಲಿಲ್ಲ‌ ಅಂದಾಗ, ಕೊಲೆ ಮಾಡಿ ಬಿಸಾಕಿ ಹೋಗಿದ್ದಾರೆ.

ಹಂತಕರು ಕಬ್ಬು ಕಟಾವ್ ಗ್ಯಾಂಗನವರು..!
ಮುಂಡಗೋಡ ತಾಲೂಕಿಗೆ ಪ್ರತೀವರ್ಷವೂ ಕಬ್ಬು ಕಟಾವ್ ಮಾಡಲು ಮಹಾರಾಷ್ಟ್ರದಿಂದ ಗ್ಯಾಂಗ್ ಗಳು ಬರತ್ತವೆ ..? ಅಂತದ್ದೇ ಕಬ್ಬು ಕಟಾವ್ ಮಾಡುವ ಗ್ಯಾಂಗ್ ನವರೇ ಈ‌ ಲಾಮಾನ ಹತ್ಯೆ ಮಾಡಿದ್ದಾರೆ. ಅಲ್ಲದೆ ಹತ್ಯೆ ಮಾಡಿ ಮಹಾರಾಷ್ಟ್ರ ಕಡೆ ಹೋಗುತ್ತಿದ್ದಾಗ ದಾರಿ‌ಮದ್ಯೆ ಧಾತವಾಡದ ಸಮೀಪ ಹೆಣ ಬೀಸಾಡಿ ಹೋಗಿದ್ದಾರೆ. ಹೀಗಾಗಿ, ಪ್ರಕರಣವನ್ನು ಬೇಧಿಸಿರೋ ಧಾರವಾಡ ಪೋಲಿಸರು ಮೂವರು ನರರಾಕ್ಷಸ ಹಂತಕರನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ‌.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !