ಹೊಸದಿಗಂತ ವರದಿ, ವಿಜಯಪುರ
ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಆಟೋ ಚಾಲಕನನ್ನು ಹತ್ಯೆಗೈದಿರುವ ಆರೋಪಿಗಳನ್ನು 24 ಗಂಟೆಯಲ್ಲಿಯೇ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ನೂರ್‌ಅಹ್ಮದ್ ಬುಡ್ಡೆಸಾಬ್ ನಾಯಿಕ್, ಸಮೀರ ರಫೀಕ್ ನಾಯಿಕ್ ಬಂಧಿತ ಆರೋಪಿಗಳು.
ಈ ಆರೋಪಿಗಳು ಹಣಕಾಸಿನ ವಿಚಾರಕ್ಕೆ ತೌಫಿಕ್ ಮೆಹಬೂಬ್ ಚಿನಿವಾರ್ ನನ್ನು ಸಿಂದಗಿ ತಾಲೂಕಿನ ಜೇವರ್ಗಿ ಹೆದ್ದಾರಿ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದರು.
ಸಿಂದಗಿ ಪಿಎಸ್ಐ ನಿಂಗಪ್ಪ ಪೂಜಾರಿ ಹಾಗೂ ಸಿಬ್ಬಂದಿ ತಂಡ 24 ಗಂಟೆಯಲ್ಲಿಯೇ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.