ಪಂಜಾಬ್ ಸಿಎಂ ಭಗವಾನ್ ಮಾನ್ ದೆಹಲಿ ನಿವಾಸದ ಮೇಲೆ ಪೊಲೀಸರಿಂದ ದಾಳಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್ ಮುಖ್ಯಮಂತ್ರಿ ಭಗವಾನ್ ಮಾನ್ ಅವರ ದೆಹಲಿಯಲ್ಲಿರುವ ಕಪುರ್ತಲಾ ಹೌಸ್ ನಿವಾಸದಲ್ಲಿ ಚುನಾವಣಾ ಆಯೋಗದ ತಂಡವೊಂದು ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಆಮ್ ಆದ್ಮಿ ಪಕ್ಷ ತಿಳಿಸಿದೆ.

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪರ ಪ್ರಚಾರ ನಡೆಸುತ್ತಿರುವ ಭಗವಂತ್ ಮಾನ್ ಅವರು ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ. ಈ ನಿವಾಸದ ಮೇಲೆ ಚುನಾವಣಾ ಆಯೋಗದ ತಂಡವು ಪಂಜಾಬ್ ಸಿಎಂ ಭಗವಂತ್ ಮಾನ್ ಅವರ ದೆಹಲಿಯ ಕಪುರ್ತಲಾ ಹೌಸ್‌ನಲ್ಲಿರುವ ನಿವಾಸದ ಮೇಲೆ ಶೋಧ ಕಾರ್ಯಾಚರಣೆಗಾಗಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ದೆಹಲಿ ಪೊಲೀಸರು ಭಗವಂತ್ ಮಾನ್ ಜಿ ಅವರ ದೆಹಲಿಯ ಮನೆ ಮೇಲೆ ದಾಳಿ ಮಾಡಲು ಬಂದಿದ್ದಾರೆ. ಬಿಜೆಪಿಯವರು ಹಗಲು ಹೊತ್ತಿನಲ್ಲಿ ಹಣ, ಶೂ, ಶೀಟ್‌ಗಳನ್ನು ಹಂಚುತ್ತಿದ್ದಾರೆ – ಅದು ಕಾಣಿಸುತ್ತಿಲ್ಲ. ಬದಲಿಗೆ ಚುನಾಯಿತ ಮುಖ್ಯಮಂತ್ರಿಯ ನಿವಾಸದ ಮೇಲೆ ದಾಳಿ ನಡೆಸಲು ಹೋಗುತ್ತಾರೆ. ದೆಹಲಿಯ ಜನರು 5 ರಂದು ಉತ್ತರ ನೀಡಲಿದ್ದಾರೆ ಎಂದು ಅತಿಶಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಚುನಾವಣಾ ಆಯೋಗ ನಿರಾಕರಣೆ
ಏತನ್ಮಧ್ಯೆ, ಭಗವಂತ್ ಮಾನ್ ಅವರ ಕಪುರ್ತಲಾ ಹೌಸ್‌ನಲ್ಲಿ ಯಾವುದೇ ದಾಳಿಯ ವರದಿಯನ್ನು ಚುನಾವಣಾ ಆಯೋಗ ನಿರಾಕರಿಸಿದೆ. ಚುನಾವಣಾ ಸಂದರ್ಭ ತನಿಖಾ ಸಂಸ್ಥೆಗಳು ದಾಳಿಗಳನ್ನು ನಡೆಸುತ್ತವೆ. ಇದು ಚುನಾವಣಾ ಆಯೋಗದ ಭಾಗವಾಗಿಲ್ಲ ಇದರೊಂದಿಗೆ ಯಾವುದೇ ರೀತಿಯ ಚುನಾವಣಾ ತನಿಖಾ ದಾಳಿಯ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅವರು ಹೇಳಿದ್ಧಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here