ಹೊಸದಿಗಂತ ವರದಿ, ಮೈಸೂರು:
ಹೋರಾಟದ ವೇಳೆ ಜೈಲಿಗೆ ಹೋಗಲು ನನಗೆ ತುಂಬಾ ಆಸೆಯಿತ್ತು. ಆದರೆ ಪೊಲೀಸರು ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ರಾಮಕೃಷ್ಣ ನಗರದ ರಮಾಗೋವಿಂದ ಸಭಾ ಭವನದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಮಾಜವಾದಿ ಪ.ಮಲ್ಲೇಶ್ ಅವರು ರಚಿಸಿರುವ `ಬುದ್ದ ನಾಗಾರ್ಜುನರ ಶೂನ್ಯಯಾನ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪ.ಮಲ್ಲೇಶ್ ಅಪ್ಪಟ ಸಮಾಜವಾದಿ. ಅವರು ಹೆಚ್ಚಿನ ಸಮಯವನ್ನು ಹೋರಾಟಕ್ಕೆ ಮೀಸಲಿಟ್ಟರು. ಹಾಗಾಗಿ ಬರೆಯುವ ಸಾಮರ್ಥ್ಯ ಇದ್ದರೂ ಹೆಚ್ಚು ಬರೆಯಲು ಆಗಲಿಲ್ಲ.
ಅವರು ಮನಸ್ಸು ಮಾಡಿದ್ದರೆ ಹಲವಾರು ಕೃತಿಗಳನ್ನು ಬರೆಯಬಹುದಿತ್ತು. ಕಾಲೇಜು ದಿನಗಳಿಂದಲೂ ಪ.ಮಲ್ಲೇಶ್ ಜೊತೆ ನನಗೆ ಹೆಚ್ಚಿನ ಒಡನಾಟವಿತ್ತು. ಎಂ.ಡಿ.ನoಜುoಡಸ್ವಾಮಿ ಹಾಗೂ ಪ.ಮಲ್ಲೇಶ್ ಅವರ ಸಹವಾಸದಿಂದ ನನಗೆ ರಾಜಕೀಯದ ಬಗ್ಗೆ ಆಸಕ್ತಿ ಬಂತು. ಇಲ್ಲದಿದ್ದರೇ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ ಎಂದರು.
ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಮಲ್ಲೇಶ್ ಸದಾ ಮುಂಚೂಣಿಯಲ್ಲಿರುತ್ತಿದ್ದರು. ರಾಜಕೀಯವಾಗಿಯೂ ನಮ್ಮಿಬ್ಬರದೂ ಆತ್ಮೀಯ ಸಂಬoಧ. ನಾನು ತಪ್ಪು ಮಾಡಿದಾಗ ತಪುö್ಪ ಮಾಡುತ್ತಿದ್ದೀಯಾ ಎಂದು ಹೇಳುವ ಎದೆಗಾರಿಕೆ ಪ.ಮಲ್ಲೇಶ್ ಅವರಿಗಿತ್ತು. ಒಮ್ಮೆ ಊಟಕ್ಕೆ ಕರೆದು ಜಗಳವಾಡಿದ್ದರು. ಅದಾದ ಮರುದಿನವೇ ನನ್ನನ್ನು ಕರೆದು ಮಾತನಾಡಿಸಿದರು. ಎಂದು ಹೇಳಿದರಲ್ಲದೆ, ಪ.ಮಲ್ಲೇಶ್ ಜೊತೆಗೂಡಿ ನಡೆಸಿದ ಹೋರಾಟದ ದಿನಗಳನ್ನು ಮೆಲುಕು ಹಾಕಿದರು. ಹೋರಾಟದ ವೇಳೆ ನನಗೆ ಜೈಲಿಗೆ ಹೋಗುವ ಆಸೆ ಇತ್ತು. ಆದರೆ ಪೊಲೀಸರು ನನ್ನನ್ನು ಬಂಧಿಸಿದರಾದರೂ ಜೈಲಿಗೆ ಕಳುಹಿಸದೆ, ಮನೆಗೆ ಹೋಗು ಅಂತ ಬಿಟ್ಟು ಕಳುಹಿಸಿದರು. ನನ್ನನ್ನು ಜೈಲಿಗೆ ಕಳಿಸಿ ಎಂದು ನಾನು ಅವರನ್ನು ಕೇಳಿಕೊಂಡರೂ, ಅವರು ನನ್ನನ್ನು ಜೈಲಿಗೆ ಕಳುಹಿಸಲಿಲ್ಲ ವಾಪಸ್ ಕಳುಹಿಸಿದರು, ಹಾಗಾಗಿ ಜೈಲಿಗೆ ಹೋಗಬೇಕೆನ್ನುವ ನನ್ನ ಆಸೆ ಈಡೇರಲಿಲ್ಲ ಎಂದು ತಮ್ಮ ಹೋರಾಟದ ದಿನಗಳನ್ನು ಮೆಲುಕು ಹಾಕಿದರು.