March 23, 2026
Monday, March 23, 2026
spot_img

ಗೋ ಹತ್ಯೆ ನಡೆಸಿದವರಿಗೆ ಸಖತ್ ಶಾಕ್ ನೀಡಿದ ಪೊಲೀಸರು: ಕಸಾಯಿ ನಡೆಸಿದ ಮನೆಯೇ ಸೀಜ್!

ಹೊಸದಿಗಂತ ವರದಿ, ಉಪ್ಪಿನಂಗಡಿ:

ಇಲ್ಲಿಗೆ ಸಮೀಪದ ಬಾರ್‍ಯ ಗ್ರಾಮದ ಹೊಸವಕ್ಲು ಎಂಬಲ್ಲಿ, ಮನೆಯೊಂದರ ಆವರಣದಲ್ಲಿ ಅಕ್ರಮವಾಗಿ ಗೋ ಹತ್ಯೆ ಮಾಡಿ ಮಾಂಸ ಮಾಡುತ್ತಿರುವುದನ್ನು ಪತ್ತೆ ಮಾಡಿರುವ ಉಪ್ಪಿನಂಗಡಿ ಪೊಲೀಸರು ಮನೆ ಜಪ್ತಿ ಮಾಡಿ ಆರೋಪಿ ದಂಪತಿ ಸಹಿತಿ 3 ಮಂದಿಯನ್ನು ಬಂಧಿಸಿದ್ದಾರೆ..

ಫೆ. 26ರಂದು ರಾತ್ರಿ ಬಾರ್‍ಯ ಗ್ರಾಮದ ಹೊಸವಕ್ಲು ನಿವಾಸಿ ಅಬ್ದುಲ್ ರಹಿಮಾನ್ ಮನೆ ಆವರಣದಲ್ಲಿ ಗೋ ಹತ್ಯೆ ಮಾಡಿ ಮಾಂಸವನ್ನು ಪ್ಯಾಕೇಟ್ ಮಾಡಲಾಗಿ ಆಟೋ ರಿಕ್ಷಾವೊಂದಕ್ಕೆ ತುಂಬಿಸುತ್ತಿದ್ದಾಗ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಸುತೇಶ್ ಮತ್ತು ಸಿಬ್ಬಂದಿಗಳು, ಆಟೋರಿಕ್ಷಾ, ಸುಮಾರು 56 ಕೆ.ಜಿ. ಮಾಂಸ ಹಾಗೂ ತೂಕದ ಯಂತ್ರ, ಮೊಬೈಲ್ ಇತರೇ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಬ್ದುಲ್ ರಹಿಮಾನ್ ಎಂಬವರು ಜಾನುವಾರು ವಧೆ ಮಾಡಲು ಬಳಸಿದ್ದ ಮನೆಯ ಆವರಣವನ್ನು ಜಪ್ತಿ ಮಾಡಲಾಗಿದೆ. ಆರೋಪಿ ಅಬ್ದುಲ್ ರಹಿಮಾನ್, ಆತನ ಪತ್ನಿ ರಹಿಮತ್ ಹಾಗೂ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !